ಕರ್ನಾಟಕ

karnataka

ETV Bharat / state

ಪ್ರತ್ಯೇಕ ಪ್ರಕರಣದಲ್ಲಿ ಒಂದೇ ಗ್ರಾಮದ ಯುವಕ, ಯುವತಿ ನಾಪತ್ತೆ - ಕನಕಗಿರಿ ಪಟ್ಟಣ

ಪ್ರತ್ಯೇಕ ಪ್ರಕರಣದಲ್ಲಿ ಒಂದೇ ಗ್ರಾಮದ ಯುವಕ ಮತ್ತು ಯುವತಿ ನಾಪತ್ತೆಯಾಗಿರುವ ಘಟನೆ ಕನಕಗಿರಿ ಪಟ್ಟಣದಲ್ಲಿ ನಡೆದಿದೆ.

Missing
ನಾಪತ್ತೆ

By

Published : Dec 22, 2020, 12:33 PM IST

ಗಂಗಾವತಿ: ಒಂದೇ ಗ್ರಾಮದ 21 ವರ್ಷದ ಯುವಕ ಮತ್ತು 19 ವಯಸ್ಸಿನ ಯುವತಿ ಪ್ರತ್ಯೇಕ ಪ್ರಕರಣಗಳಲ್ಲಿ ನಾಪತ್ತೆಯಾದ ಘಟನೆ ಕನಕಗಿರಿ ಪೊಲೀಸ್ ಠಾಣೆಯ ಕನಕಗಿರಿ ಪಟ್ಟಣದ 6 ಮತ್ತು 12ನೇ ವಾರ್ಡ್​ನಲ್ಲಿ ನಡೆದಿದೆ.

ಪಟ್ಟಣ ಪಂಚಾಯಿತಿಯ ಜ್ಯೋತಿ ಅಮರೇಶ ಕೊಪ್ಪಳ ಎಂಬ ಯುವತಿ, ಅಜ್ಜಿ ತಿಪ್ಪಮ್ಮ ಅವರ ಮನೆಗೆ ಹೋಗಿ ಬರುವುದಾಗಿ ಹೇಳಿ ಡಿ.12ರಂದು ತೆರಳಿದ್ದು ಮನೆಗೆ ವಾಪಸ್ ಬಂದಿಲ್ಲ. ಈ ಬಗ್ಗೆ ಯುವತಿಯ ತಾಯಿ ಶಾರದಮ್ಮ ಅಮರೇಶಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.

ಇದೇ ಗ್ರಾಮದ 12ನೇ ವಾರ್ಡ್​ನ ಇಮಾಮ್‌ ಸಾಬ ವಲೀಸಾಬ ಜೂಲಿಕೇರಿ ಎಂಬ ಯುವಕ, 5ರಂದು ಪಂಚರ್ ಶಾಪ್​ಗೆ ಹೋಗಿ ಬರುತ್ತೇನೆ ಎಂದು ಹೋದವನು ಮರಳಿ ಮನೆಗೆ ಬಂದಿಲ್ಲ ಎಂದು ನಾಪತ್ತೆಯಾದ ಯುವಕನ ತಂದೆ ವಲಿಸಾಬ್ ಇಮಾಮ್‌ಸಾಬ ದೂರು ನೀಡಿದ್ದಾರೆ.

ಓದಿ:ಕಣ್ತಪ್ಪಿನಿಂದ ಆದ ಪ್ರಮಾದ..ಕ್ಷಣಾರ್ಧದಲ್ಲಿಯೇ ಹಾರಿಹೋಯ್ತು ಯುವಕನ ಪ್ರಾಣಪಕ್ಷಿ

ABOUT THE AUTHOR

...view details