ಕುಷ್ಟಗಿ(ಕೊಪ್ಪಳ):ಯೋಗ ದಿನದ ಪ್ರಯುಕ್ತ, ಇಂದು 5 ವರ್ಷದ ಬಾಲಕಿ ಆರಾಧ್ಯ ಎಸ್.ಎಂ. ಯೋಗಾಸನದ ವಿವಿಧ ಭಂಗಿಗಳ ಮೂಲಕ ತನ್ನ ಪ್ರತಿಭೆಯನ್ನು ಹೊರಹಾಕಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಕುಷ್ಟಗಿಯಲ್ಲಿ ಯೋಗಾಸನದಿಂದ ಗಮನ ಸೆಳೆದ 5 ವರ್ಷದ ಬಾಲಕಿ - Yoga day celebration
ಮೂಲತಃ ಇಲಕಲ್ ಪಟ್ಟಣದ ಆರಾಧ್ಯ ಎಸ್.ಎಂ. ಇಲಕಲ್ ಮಾರ್ಗದರ್ಶನ ಸ್ಕೂಲ್ ನಲ್ಲಿ ಯುಕೆಜಿ ವಿದ್ಯಾಭ್ಯಾಸ ಮಾಡುತ್ತಿದ್ದು, ಭವಿಷ್ಯದ ಯೋಗಪಟು ಎನ್ನುವ ಭರವಸೆ ಮೂಡಿಸಿದ್ದಾಳೆ.
Yoga day
ಹೌದು, 6ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಇಲ್ಲಿನ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ 5 ವರ್ಷದ ಬಾಲಕಿ ಎಲ್ಲರ ಗಮನ ಸೆಳೆದಿದ್ದಾಳೆ.
ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆರಾಧ್ಯ ಎಸ್.ಎಂ. ತಮ್ಮ ದೊಡ್ಡಮ್ಮ ಶಶಿಕಲಾ ದಾವಣಗೇರ ಅವರೊಂದಿಗೆ ಆಗಮಿಸಿದ್ದಳು. ಈ ವೇಳೆ ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾಳೆ.