ಕುಷ್ಟಗಿ (ಕೊಪ್ಪಳ):ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಮೃದ್ಧಿಯಾಗಿ ಬೆಳೆದ ಹೆಸರು ಬೆಳೆಗೆ ಹಳದಿ ಮೊಜಾಯಿಕ್ ವೈರಸ್ ವ್ಯಾಪಿಸಿ ಹಾನಿಗೀಡಾಗಿದೆ. ಇಂದು ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಸಿದ್ದೇಶ ಎಲ್. ಭೇಟಿ ನೀಡಿ ಪರಿಶೀಲಿಸಿದರು.
ಕೊಪ್ಪಳ ಉಪ ಕೃಷಿ ನಿರ್ದೇಶಕರ ಪರಿಶೀಲನೆ ತಾಲೂಕಿನ ವಣಗೇರಾ ಸೀಮಾದಲ್ಲಿ ಬೆಳೆದ ಹೆಸರು ಬೆಳೆ ಪರಿಶೀಲಿಸಿದ ಸಿದ್ದೇಶ, ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಈ ರೋಗ ಕಾಣಿಸಿಕೊಂಡಿದೆ. ವೈರಸ್ ಮೂಲದ ರೋಗವಾಗಿದೆ. ರಸ ಹೀರುವ ಕರಿ ಶೀರು (ಹೇನು) ಗಾಳಿಯಲ್ಲಿ ಹಾರುವುದರಿಂದ ಇತರ ಹೊಲಗಳಿಗೆ ವ್ಯಾಪಿಸುತ್ತಿದ್ದು, ಇಳುವರಿ ಕುಂಠಿತವಾಗಲಿದರ. ಈ ಕುರಿತು ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ್, ತಾಲೂಕಿನಲ್ಲಿ ಹೆಸರು 7,500 ಹೆಕ್ಟೇರ್ ಬದಲು 5,900 ಹೆಕ್ಟೇರ್ ಇಳುವರಿಯಾಗಿದೆ. ಕರಿ ಹೇನು ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ 0.5ml ಇಮುಡಾಕ್ಲೋಪಿಡ್ ಸಿಂಪಡಿಸಲು ಸೂಚಿಸಲಾಗಿತ್ತು. ಹಳದಿ ಎಲೆಗಳು ಜಾಸ್ತಿಯಾಗಿರುವುದು ಕಂಡು ಬಂದರೆ ಕಿತ್ತು ಹಾಕಿ ಸುಡಬೇಕು. ಈ ಹಳದಿ ಮೊಜಾಯಿಕ್ ವೈರಸ್ ನಿಂದ ಶೇ.20 ರಷ್ಟು ಹಾನಿಯಾಗಿರಬಹುದೆಂದ ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಹೆಸರಿಗೆ ಹಳದಿ ಮೊಜಾಯಿಕ್ ವೈರಸ್ ಕುಷ್ಟಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ನಾಯಕ ಅವರಿಗೆ ಚಳಗೇರಾ ಗ್ರಾಮದ ರೈತರು, ಹೆಸರು ಬೆಳೆಗೆ ಹಳದಿ ಮೋಜಾಯಿಕ್ ಹಾನಿಗೆ ಪರಿಹಾರ ನೀಡಲು ಮನವಿ ಸಲ್ಲಿಸಿದರು. ನಂತರ ಶಿರೆಸ್ತೇದಾರ ಸತೀಶ್, ಗ್ರಾಮ ಲೆಕ್ಕಾಧಿಕಾರಿ ಸಾನಿಯಾಬಾನು ಅವರಿಗೆ ಮನವಿ ಸಲ್ಲಿಸಿದರು.