ಕೊಪ್ಪಳ: ಚಿತ್ರ ನಟ ಯಶ್ ಅವರ ಯಶೋಮಾರ್ಗ ಫೌಂಡೇಶನ್ ವತಿಯಿಂದ ಅಭಿವೃದ್ಧಿ ಪಡಿಸಿದ್ದ ಕೆರೆಯೊಂದು ಇಂದು ತುಂಬಿ ನಿಂತಿದ್ದು, ಕೆರೆಯ ಸುತ್ತಮುತ್ತಲ ಗ್ರಾಮದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದಲ್ಲಿರುವ ಕೆರೆ ಇದಾಗಿದ್ದು, ಅಂತರ್ಜಲ ಮಟ್ಟ ತೀರಾ ಕುಸಿತದಿಂದ ಈ ಭಾಗದ ರೈತರು ಕೃಷಿ ತೊರೆದು ಬೇರೆ ಉದ್ಯೋಗ ಅರಸಿ ಹೋಗುತ್ತಿದ್ದರು.
ಚಿತ್ರನಟ ಯಶ್ ರೈತರ ಅನುಕೂಲಕ್ಕಾಗಿ ಅವರು 2016 ರಲ್ಲಿ ʻಯಶೋಮಾರ್ಗʼದಿಂದ ಕೆರೆ ಅಭಿವೃದ್ದಿ ಪಡಿಸಿದರು. ಅವರ ಸೇವಾ ಕಾರ್ಯ ಈಗ ಯಶಸ್ಸು ಕಂಡಿದೆ. ಯಶ್ ಕಾರ್ಯಕ್ಕೆ ರೈತರು ಖುಷಿಗೊಂಡಿದ್ದಾರೆ.