ಕರ್ನಾಟಕ

karnataka

ETV Bharat / state

ಬಿಜೆಪಿ ನೀತಿ ಬಿಟ್ಟು ರಾಜಕಾರಣ ಮಾಡುತ್ತದೆ: ಬಸವರಾಜ ರಾಯರೆಡ್ಡಿ - ಕೋಟ್ಯಂತರ ರೂ. ಖರ್ಚು ಮಾಡಿ ಚುನಾವಣೆ ಗೆದ್ದರು ಬಿಜೆಪಿ

ಬಿಜೆಪಿ ನೀತಿ ಬಿಟ್ಟು ರಾಜಕಾರಣ ಮಾಡುತ್ತದೆ. ಅಧಿಕಾರಕ್ಕಾಗಿ 17 ಶಾಸಕರಿಂದ ರಾಜೀನಾಮೆ‌ ಕೊಡಿಸಿದರು. ಬಳಿಕ ಕೋಟ್ಯಂತರ ರೂ. ಖರ್ಚು ಮಾಡಿ ಚುನಾವಣೆ ಗೆದ್ದರು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆರೋಪಿಸಿದ್ದಾರೆ.

ಬಸವರಾಜ ರಾಯರೆಡ್ಡಿ
ಬಸವರಾಜ ರಾಯರೆಡ್ಡಿ

By

Published : Feb 20, 2020, 7:15 PM IST

ಕೊಪ್ಪಳ: ಹೆಚ್ಚು ಅಪರಾಧ ಪ್ರಕರಣಗಳನ್ನು ಮಾಡುವವರೇ ಇತ್ತೀಚಿನ ರಾಜಕಾರಣದಲ್ಲಿ ಶಾಸಕರು, ಸಂಸದರಾಗುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಮನುಷ್ಯ ಒಂದು ಕಾನೂನಿಗೆ ಮತ್ತೊಂದು ನೀತಿಗೆ ಬದುಕುತ್ತಾನೆ.‌ ಕಾನೂನು ಬೇರೆ ಬೇರೆ ದೇಶಗಳಲ್ಲಿ ಬೇರೆಯಾಗಿರುತ್ತದೆ. ಆದರೆ, ನೀತಿ ಎಲ್ಲಾ ಕಡೆಯೂ ಒಂದೇ ಆಗಿರುತ್ತದೆ. ಬಿಜೆಪಿ ನೀತಿ ಬಿಟ್ಟು ರಾಜಕಾರಣ ಮಾಡುತ್ತದೆ. ಅಧಿಕಾರಕ್ಕಾಗಿ 17 ಶಾಸಕರಿಂದ ರಾಜೀನಾಮೆ‌ ಕೊಡಿಸಿದರು. ಬಳಿಕ ಕೋಟ್ಯಂತರ ರೂ. ಖರ್ಚು ಮಾಡಿ ಚುನಾವಣೆ ಗೆದ್ದರು. ಕಾನೂನಿನ ಪ್ರಕಾರ ಅವರದು ಸರಿ ಇರಬಹುದು. ಆದರೆ ನೈತಿಕವಾಗಿ ಅಲ್ಲ. ಇನ್ನು ಈ ವ್ಯವಸ್ಥೆ ಸರಿಯಾಗಬೇಕು ಎಂದರೆ ಜನರು ಸರಿಯಾಗಬೇಕು. ಇಲ್ಲವಾದಲ್ಲಿ ಕ್ರಿಮಿನಲ್​ಗಳೇ ಅಸೆಂಬ್ಲಿಗೆ ಬಂದು ಕಾನೂನು ‌ಮಾಡ್ತಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ

ಎಸ್​ಡಿಪಿ, ಪಿಎಫ್ಐ ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲ ನೀಡ್ತಿದೆ ಎಂಬ ಸಚಿವ ಶ್ರೀರಾಮುಲು ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ರಾಯರೆಡ್ಡಿ, ಇದನ್ನು ಪ್ರೂವ್ ಮಾಡಲಿ ಎಂದರು.‌ ಅಲ್ಲದೆ ರಾಜಕಾರಣಕ್ಕಾಗಿ ಬಾಯಿಗೆ ಬಂದಂತೆ ಮಾತನಾಡಬಾರದು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಅಗೋಚರವಾದ ತುರ್ತು ಪರಸ್ಥಿತಿ ನಿರ್ಮಾಣವಾಗಿದೆ. ಪ್ರಜೆಗಳಿಗೆ ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ದೇಶದ ವಿರುದ್ಧ ಹೇಳಿಕೆ ನೀಡಿದರೆ ಅಂತವರ ಮೇಲೆ ದೇಶದ್ರೋಹದ ಕೇಸ್ ದಾಖಲಿಸಬಹುದು. ಆದರೆ ಸಿಎಎ, ಎನ್ಆರ್​ಸಿ ವಿರೋಧಿಸಿದರೆ ದೇಶದ್ರೋಹದ ಕೇಸ್ ಹಾಕ್ತಿದ್ದಾರೆ ಎಂದರು.

ಕವಿ ಸಿರಾಜ್ ಬಿಸರಳ್ಳಿ ಅವರ ಮೇಲೆ ಕೇಸ್ ಹಾಕಲಾಗಿದೆ. ಅದನ್ನು ಪ್ರಕಟಿಸಿದ ರಾಜಾಭಕ್ಷಿ ಮೇಲೂ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರ ಮಾಡಿ ಕೇಸ್ ದಾಖಲಿಸಿಕೊಳ್ಳಬೇಕಿತ್ತು. ಬಿಎಸ್​ವೈಗೆ ಸಂವಿಧಾನದ ಮೇಲೆ ನಂಬಿಕೆ ಇದ್ದರೆ ಈ ಇಬ್ಬರ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕು ಹಾಗೂ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details