ಕರ್ನಾಟಕ

karnataka

ETV Bharat / state

ದೇವರ ಜಗುಲಿಯಲ್ಲಿ ಶಾಸಕನ ಮೊಬೈಲ್ ಫೋಟೋಗೆ ಪೂಜೆ : ಮಂತ್ರಿಯಾಗಲೆಂದು ಹರಕೆ ಹೊತ್ತ ಅಭಿಮಾನಿ - ಕನಕಗಿರಿ ಶಾಸಕ ಬಸವರಾಜ

ದೇವರ ಮನೆಯಲ್ಲಿ ಶಾಸಕ ಬಸವರಾಜ ದಡೇಸುಗೂರು ಫೋಟೋ ಕಾಣುವ ಹಾಗೆ ಮೊಬೈಲ್​ ಇರಿಸಿ ಅಭಿಮಾನಿಯೊಬ್ಬ ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದಾನೆ..

dsd
ದೇವರ ಜಗುಲಿಯಲ್ಲಿ ಶಾಸಕನ ಮೊಬೈಲ್ ಫೋಟೋಗೆ ಪೂಜೆ

By

Published : Apr 14, 2021, 8:21 PM IST

ಗಂಗಾವತಿ :ಅಭಿಮಾನಿಯೊಬ್ಬ ದೇವರ ಜಗುಲಿ ಮೇಲೆ ಶಾಸಕ ಬಸವರಾಜ ದಡೇಸುಗೂರುಫೋಟೋ ಕಾಣುವ ಹಾಗೆ ಮೊಬೈಲ್​ ಇಟ್ಟು ಪೂಜೆ ಮಾಡಿರುವ ಪ್ರಸಂಗ ಬೆಳಕಿಗೆ ಬಂದಿದೆ.

ದೇವರ ಜಗುಲಿಯಲ್ಲಿ ಶಾಸಕನ ಮೊಬೈಲ್ ಫೋಟೋಗೆ ಪೂಜೆ

ಕನಕಗಿರಿ ಕ್ಷೇತ್ರದ ಕಾರಟಗಿ ತಾಲೂಕಿನ ಎನ್ ಬಸವಣ್ಣ ಕ್ಯಾಂಪ್​ ಯುವಕ ಮಲ್ಲಿಕಾರ್ಜುನ ನಾಯಕ್ ಎಂಬಾತ ಪೂಜೆ ಸಲ್ಲಿಸಿದವರು. ಶಾಸಕ ಬಸವರಾಜ ದಡೇಸುಗೂರುಚಿತ್ರವಿಟ್ಟು ಮುಂದಿನ ಚುನಾವಣೆಯಲ್ಲಿ ಶಾಸಕರಾಗಿ ಮರು ಆಯ್ಕೆಯಾಗಿ ಮುಂದಿನ ಬಾರಿ ಮಂತ್ರಿಗಿರಿ ಸಿಗಬೇಕು ಎಂದು ಹರಕೆ ಹೊತ್ತಿದ್ದಾನೆ.

ABOUT THE AUTHOR

...view details