ಗಂಗಾವತಿ:ಪರಿಸರ ದಿನಾಚರಣೆ ಪ್ರಯುಕ್ತ ನಗರಸಭೆ ಪೌರಕಾರ್ಮಿಕರು ಗಿಡಗಳ ಮೆರವಣಿಗೆ ನಡೆಸಿ ಗಮನ ಸೆಳೆದರು.
ಪರಿಸರ ದಿನಾಚರಣೆ: ಗಮನ ಸೆಳೆದ ಗಿಡಗಳ ಮೆರವಣಿಗೆ - ಗಮನ ಸೆಳೆದ ಗಿಡಗಳ ಮೆರವಣಿಗೆ
ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು ಗಿಡಗಳ ಮೆರವಣಿಗೆ ನಡೆಸಿದರು.
ಗಮನ ಸೆಳೆದ ಗಿಡಗಳ ಮೆರವಣಿಗೆ
ಸಾಮಾಜಿಕ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ, ನಗರಸಭೆ, ಪೊಲೀಸ್, ನ್ಯಾಯಾಂಗ, ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪೌರ ಕಾರ್ಮಿಕರಿಗೆ ತಲಾ ಒಂದು ಸಸಿ ವಿತರಿಸಲಾಯಿತು. ಪೌರಾಯಕ್ತ ಗಂಗಾಧರ ಅವರು, ಸಸಿಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ನೌಕರರಿಗೆ ವಹಿಸಿದರು. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಗಿಡಗಳ ಹೊತ್ತ ನೌಕರರು ಮೆರವಣಿಗೆ ನಡೆಸಿದರು.