ಕುಷ್ಠಗಿ(ಕೊಪ್ಪಳ):ಕೊರೊನಾ ತಡೆಗಟ್ಟಲು ಪರಿಸರ ಸಂರಕ್ಷಣೆಯಿಂದ ಸಾಧ್ಯ. ಸಸಿಗಳನ್ನು ಹೆಚ್ಚು ಬೆಳೆಸುವುದರಿಂದ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದು ಠಾಣಾಧಿಕಾರಿ ಗೀತಾಂಜಲಿ ಶಿಂಧೆ ಅಭಿಪ್ರಾಯಪಟ್ಟರು
ಕೊರೊನಾ ತಡೆಗೆ ಪರಿಸರ ಬೆಳೆಸಿ: ಗೀತಾಂಜಲಿ ಶಿಂಧೆ - ವಿಶ್ವ ಪರಿಸರ ದಿನ
ವಿಶ್ವ ಪರಿಸರ ದಿನದ ನಿಮಿತ್ತ ಕುಷ್ಠಗಿ ಠಾಣೆ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿದರು.
![ಕೊರೊನಾ ತಡೆಗೆ ಪರಿಸರ ಬೆಳೆಸಿ: ಗೀತಾಂಜಲಿ ಶಿಂಧೆ Kushtagi Police station](https://etvbharatimages.akamaized.net/etvbharat/prod-images/768-512-7497097-thumbnail-3x2-mng.jpg)
ಕುಷ್ಠಗಿ ಠಾಣೆ
ವಿಶ್ವ ಪರಿಸರ ದಿನದ ನಿಮಿತ್ತ ಠಾಣೆಯ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿ ಮಾತನಾಡಿದ ಅವರು, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಠಾಣೆ ಆವರಣದಲ್ಲಿ ಸುಮಾರು 50ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.
ಈ ವೇಳೆ, ಪೊಲೀಸ್ ಸಿಬ್ಬಂದಿ ಬಸವರಾಜ, ಆನಂದ, ಸಾವಿತ್ರಮ್ಮ , ಪ್ರೇಮಾ ಗೌಡರ , ಗೀತಮ್ಮ, ವೀರೇಶ, ಮರಿಯಪ್ಪ ಬ್ಯಾಳಿ, ರಾಜಾಬಕ್ಷಿ ಮತ್ತು ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಶಂಕರಗೌಡ ಅಕ್ಕೇರಿ , ಅರಣ್ಯ ವೀಕ್ಷಕರಾದ ತಿಪ್ಪಣ್ಣ ,ಯಮನೂರಪ್ಪ ಗಂಗಾಧರ, ಲಕ್ಷ್ಮಣ, ಛತ್ರಪ್ಪ, ಹನುಮಂತ ಇದ್ದರು.