ಕೊಪ್ಪಳ :ವಿಶ್ವ ನೃತ್ಯ ದಿನದ ಅಂಗವಾಗಿ ಗಂಗಾವತಿ ನಗರದ ನೃತ್ಯ ಸಂಯೋಜಕರು,ಪತ್ರಕರ್ತರ ನೇತೃತ್ವದಲ್ಲಿ ನಗರದಲ್ಲಿ ಕೊರೊನಾ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ವಿಶ್ವ ನೃತ್ಯ ದಿನ: ನೃತ್ಯ ಸಂಯೋಜಕರು,ಪತ್ರಕರ್ತರಿಂದ ಕೊರೊನಾ ಜಾಗೃತಿ ಜಾಥಾ.. - Corona Awareness Jatha
ವಿಶ್ವ ನೃತ್ಯ ದಿನದ ಅಂಗವಾಗಿ ಗಂಗಾವತಿಯಲ್ಲಿ ಕೊರೊನಾ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಳೆದ ಐದು ವಾರದಿಂದ ಕೊರೊನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್,ಆರೋಗ್ಯ ಸಿಬ್ಬಂದಿಗೆ ಹಾಗೂ ಸೂಕ್ತ ನಿರ್ದೇಶನ ನೀಡಿ ಜವಾಬ್ದಾರಿ ನಿಭಾಯಿಸಿದ ಶಾಸಕ ಪರಣ್ಣ ಮುನವಳ್ಳಿ ಅವರನ್ನ ಸನ್ಮಾನಿಸಿ,ಗೌರವಿಸಲಾಯಿತು.
![ವಿಶ್ವ ನೃತ್ಯ ದಿನ: ನೃತ್ಯ ಸಂಯೋಜಕರು,ಪತ್ರಕರ್ತರಿಂದ ಕೊರೊನಾ ಜಾಗೃತಿ ಜಾಥಾ.. World Dance Day: Corona Awareness Jatha by choreographers and journalists](https://etvbharatimages.akamaized.net/etvbharat/prod-images/768-512-6982676-533-6982676-1588132501056.jpg)
ವಿಶ್ವ ನೃತ್ಯ ದಿನ: ನೃತ್ಯ ಸಂಯೋಜಕರು,ಪತ್ರಕರ್ತರಿಂದ ಕೊರೊನಾ ಜಾಗೃತಿ ಜಾಥಾ
ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಮುಂದೆಯಿರುವ ಕೃಷ್ಣದೇವರಾಯ ವೃತ್ತದಲ್ಲಿ ಜಾಥಾಗೆ ಡಿವೈಎಸ್ಪಿ ಡಾ.ಬಿ ಪಿ ಚಂದ್ರಶೇಖರ ಚಾಲನೆ ನೀಡಿದರು. ಈ ವೇಳೆ ಕಳೆದ ಐದು ವಾರದಿಂದ ಕೊರೊನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್,ಆರೋಗ್ಯ ಸಿಬ್ಬಂದಿ ಹಾಗೂ ಸೂಕ್ತ ನಿರ್ದೇಶನ ನೀಡಿ ಜವಾಬ್ದಾರಿ ನಿಭಾಯಿಸಿದ ಶಾಸಕ ಪರಣ್ಣ ಮುನವಳ್ಳಿ ಅವರನ್ನ ಸನ್ಮಾನಿಸಿ,ಗೌರವಿಸಲಾಯಿತು.
ಈ ವೇಳೆ ಕಾನಿಪ ಸಂಘದ ತಾಲೂಕು ಅಧ್ಯಕ್ಷ ವಿಶ್ವನಾಥ, ನಾಗರಾಜ ಇಂಗಳಗಿ, ನೃತ್ಯ ಸಂಯೋಜಕರಾದ ದೇವರಾಜ, ಮೊಜಸ್ ಪೌಲ್ ಉಪಸ್ಥಿತರಿದ್ದರು.