ಕರ್ನಾಟಕ

karnataka

ETV Bharat / state

ಎಪಿಎಂಸಿ ಖಾಸಗೀಕರಣ ವಿರೋಧಿಸಿ ಗಂಗಾವತಿಯಲ್ಲಿ ಶ್ರಮಿಕರಿಂದ ಪ್ರತಿಭಟನೆ - ಎಪಿಎಂಸಿ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಎಪಿಎಂಸಿಗಳನ್ನು ಖಾಸಗೀಕರಣ ಮಾಡುವುದರಿಂದ ನಮಗೆ ತೊಂದರೆಯಾಗುತ್ತದೆ, ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ನೂರಾರು ಹಮಾಲಿಗಳು ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಿದರು.

Workers protest in Gangavathi
ಗಂಗಾವತಿಯಲ್ಲಿ ಶ್ರಮಿಕರಿಂದ ಪ್ರತಿಭಟನೆ

By

Published : May 13, 2020, 9:18 PM IST

ಗಂಗಾವತಿ(ಕೊಪ್ಪಳ): ರಾಜ್ಯದ ಎಪಿಎಂಸಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ತಾಲೂಕಿನ ಶ್ರೀರಾಮನಗರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ನೂರಾರು ಶ್ರಮಿಕರು ಪ್ರತಿಭಟನೆ ನಡೆಸಿದರು.

ಗಂಗಾವತಿಯಲ್ಲಿ ಶ್ರಮಿಕರಿಂದ ಪ್ರತಿಭಟನೆ

ಕಾಂಗ್ರೆಸ್ ಮುಖಂಡ ಹಾಗೂ ಗಂಗಾವತಿ ಎಪಿಎಂಸಿ ಸಮಿತಿಯ ನಿರ್ದೇಶಕ ರೆಡ್ಡಿ ಶ್ರೀನಿವಾಸ್​​​​​​​​​​ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಮಿಕರು ಸರ್ಕಾರದ ಈ ನಿರ್ಧಾರದಿಂದ ಲಕ್ಷಾಂತರ ಜನ ಶ್ರಮಿಕರಿಗೆ ತೊಂದರೆಯಾಗುತ್ತದೆ ಎಂದು ಆರೋಪಿಸಿದರು. ಈ ಬಗ್ಗೆ ಮಾತನಾಡಿದ ರೆಡ್ಡಿ ಶ್ರೀನಿವಾಸ್​​​​, ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು, ಇಲ್ಲವಾದಲ್ಲಿ ಎಪಿಎಂಸಿಯನ್ನೇ ಅವಲಂಬಿಸಿದ ಲಕ್ಷಾಂತರ ರೈತರಿಗೆ ಅನ್ಯಾಯವಾಗಲಿದೆ. ಈ ಬಗ್ಗೆ ಕೂಡಲೇ ಸರ್ಕಾರ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ಗಂಗಾವತಿಯಲ್ಲಿ ಶ್ರಮಿಕರಿಂದ ಪ್ರತಿಭಟನೆ
ಗಂಗಾವತಿಯಲ್ಲಿ ಶ್ರಮಿಕರಿಂದ ಪ್ರತಿಭಟನೆ

ABOUT THE AUTHOR

...view details