ಗಂಗಾವತಿ(ಕೊಪ್ಪಳ): ತಾಲ್ಲೂಕಿನ ಕಡೇಬಾಗಿಲು ಬಳಿ ಗ್ರಾಮಕ್ಕೆ ರುದ್ರಭೂಮಿ ಒದಗಿಸಿಕೊಡುವಂತೆ ಹಾಗೂ ಇತರೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕಂದಾಯ ಇಲಾಖೆ ವಿರುದ್ಧ ಮಹಿಳೆಯರು ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಆನೆಗೊಂದಿ ಗ್ರಾಮ ಪಂಚಾಯಿತಿಯ ಚಿಕ್ಕರಾಂಪೂರ, ಕಡೆಬಾಗಿಲು ಮತ್ತು ಆನೆಗೊಂದಿ ಗ್ರಾಮದ ಮಹಿಳೆಯರು ಗ್ರಾಮಕ್ಕೆ ಸ್ಮಶಾನ ಭೂಮಿ, ಸರ್ಕಾರಿ ಜಾಗದ ಹಕ್ಕು-ಪತ್ರ ನೀಡುವಂತೆ ಒತ್ತಾಯಿಸಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದರು.
ಮಹಿಳೆಯರಿಂದ ರಸ್ತೆ ತಡೆದು ಪ್ರತಿಭಟನೆ ಇದರಿಂದಾಗಿ ಗಂಗಾವತಿ-ಹುಲಿಗಿ ಮತ್ತು ಗಂಗಾವತಿ-ಹೊಸಪೇಟೆ ಮಧ್ಯ ಸಂಚರಿಸುವ ಸಾರಿಗೆ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿತ್ತು. ರಸ್ತೆ ತಡೆಯಿಂದಾಗಿ ನೂರಾರು ವಾಹನ ಸವಾರರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ನಿಂತು ಪರದಾಡುವಂತಾಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಪ್ರತಿಭಟನೆಕಾರರ ಮನವಿ ಸ್ವೀಕರಿಸಿದರು.
ಇದನ್ನೂ ಓದಿ:ಸಿಗದ ಕೃಷಿ ಭೂಮಿ ಸೌಲಭ್ಯ.. ನಾಳೆ ಫ್ರೀಡಂ ಪಾರ್ಕ್ನಲ್ಲಿ ಮಾಜಿ ಸೈನಿಕರಿಂದ ಪ್ರತಿಭಟನೆ