ಕರ್ನಾಟಕ

karnataka

ETV Bharat / state

ಗಂಡ ಬೇಡ... ಹಳೇ ಲವರ್​ ಬೇಕೆಂದು ಯುವತಿ ಪ್ರತಿಭಟನೆ - undefined

ನನಗೆ ನನ್ನ ಗಂಡ ಬೇಡ...ಹಳೇ ಲವರ್​ ಬೇಕೆಂದು ಯುವತಿಯೊಬ್ಬಳು ಮಾಜಿ ಪ್ರಿಯಕರನ ಮನೆ ಮುಂದೆ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಪ್ರತಿಭಟನೆ ನಡೆಸುತ್ತಿರುವ ಯುವತಿ

By

Published : May 8, 2019, 6:00 PM IST

Updated : May 8, 2019, 7:53 PM IST

ಕೊಪ್ಪಳ:ಪತಿಯಿಂದ ದೂರವಾದ ಯುವತಿಯೊಬ್ಬಳು ತನಗೆ ಹಳೇ ಲವರ್​ ಬೇಕೆಂದು, ಮಾಜಿ ಪ್ರಿಯಕರನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ಘಟನೆ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.

ತಾನು ವಾಸವಿದ್ದು ಗ್ರಾಮದ ವಿನಯಕುಮಾರ್ ಎಂಬಾತನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ಯುವತಿ.ಹಳೇ ಪ್ರಿಯಕರ ಬೇಕೆಂದು ಪಟ್ಟು ಹಿಡಿದಿದ್ದು, ಯುವಕನ ಮನೆಯವರು ತಬ್ಬಿಬ್ಬಾಗಿದ್ದಾರೆ.

ಹಳೇ ಲವರ್​ ಬೇಕೆಂದು ಯುವತಿ ಪ್ರತಿಭಟನೆ

ಘಟನೆಯ ವಿವರ:
ಯುವತಿಯನ್ನು ವಿನಯ್ ಕುಮಾರ್​ ಎಂಬಾತ ಪ್ರೀತಿಸುತ್ತಿದ್ದನಂತೆ. ಆದರೆ ಆಕೆಗೆ ಬೇರೆ ಕಡೆ ಮದುವೆ ಮಾಡಿಕೊಡಲಾಗಿತ್ತು. ಈಗ ಯುವತಿಯು ಪತಿಯನ್ನು ತೊರೆದು ವಿನಯ್​ ಕುಮಾರ್ ಬೇಕು ಎಂದು ಆತನ ಮನೆಯ‌ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ.

ಪ್ರತಿಭಟನೆಯಿಂದ ಬೇಸತ್ತ ಯುವಕನ ಮನೆಯವರು ಮನೆಗೆ ಬೀಗ ಹಾಕಿ ಬೇರೆ‌ ಊರಿಗೆ ತೆರಳಿದ್ದಾರೆ. ಆದರೆ ವಿಚ್ಚೇದನ ಬಳಿಕ‌ ನನ್ನನ್ನು ವಿನಯ್ ಮದುವೆ ಆಗಿದ್ದಾನೆ ಎಂದು ಯುವತಿ ಆರೋಪಿಸಿ ತನ್ನ ಪ್ರತಿಭಟನೆ ಮುಂದುವರೆಸಿದ್ದಾಳೆ.

Last Updated : May 8, 2019, 7:53 PM IST

For All Latest Updates

TAGGED:

ABOUT THE AUTHOR

...view details