ಕರ್ನಾಟಕ

karnataka

ETV Bharat / state

ಹೊಟ್ಟೆಗೆ ಅನ್ನ ತಿಂತೀರಿ ಅರ್ಥ ಆಗಲ್ವಾ ? ನಗರಸಭೆಯ ಸಿಬ್ಬಂದಿಗೆ ಚಳಿ ಬಿಡಿಸಿದ ಮಹಿಳೆ - Garbage problem in the Gangavti

ಓಣಿಯಲ್ಲಿ ಎಷ್ಟು ಸ್ವಚ್ಛ ಮಾಡಿದರೂ ಕಸಕಡ್ಡಿ ಹಾಂಗೆ ಬಂದು ಬೀಳ್ತದೆ. ದಿನಾಲೂ ಬಂದು ಗಾಡಿಯಲ್ಲಿ ಕಸ ತಗೊಂಡು ಹೋಗಾಕ ನಿಮಗೇನು ಆಗಲ್ವಾ. ಹೊಟ್ಟೆಗೆ ಅನ್ನ ತಿಂತೀರಿ ಅರ್ಥ ಆಗಲ್ವಾ ಎಂದು ಗಂಗಾವತಿ ನಗರಸಭೆ ಸಿಬ್ಬಂದಿಗೆ ಮಹಿಳೆವೋರ್ವಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ದೃಶ್ಯ ವೈರಲ್​ ಆಗಿದೆ.

ನಗರಸಭೆಯ ಸಿಬ್ಬಂದಿಗೆ ಜಾಡಿಸಿದ ಮಹಿಳೆ

By

Published : Nov 13, 2019, 1:56 PM IST

ಗಂಗಾವತಿ: ಓಣಿಯಲ್ಲಿ ಎಷ್ಟು ಸ್ವಚ್ಛ ಮಾಡಿದರೂ ಸಹ ಕಸಕಡ್ಡಿ ಹಂಗ ಇರ್ತದ. ದಿನವೂ ಬಂದು ಕಸ ತೆಗೆದುಕೊಂಡು ಹೋಗೋಕೆ ನಿಮಗೇನು ಆಗಿದೆ. ಹೊಟ್ಟೆಗೆ ಅನ್ನ ತಿಂತೀರಿ. ಅರ್ಥ ಆಗಲ್ವಾ ನಿಮ್ಗೆ ಎಂದು ಮಹಿಳೆವೋರ್ವರು ನಗರಸಭೆಯ ಸಿಬ್ಬಂದಿ ವಿರುದ್ಧ ಹರಿಹಾಯ್ದಿದ್ದಾರೆ.

ಹಲವು ದಿನಗಳಿಂದ ನಗರಸಭೆಯ ಕಸ ಸಂಗ್ರಹಿಸುವ ವಾಹನ ಬಾರದಿದ್ದರಿಂದ ನಗರದ ಈದ್ಗಾ ಮೈದಾನದ ಹಿಂಭಾಗದಲ್ಲಿ ಕಸದ ರಾಶಿಯೇ ತುಂಬಿತ್ತು. ಇದಕ್ಕೆ ಆಕ್ರೋಶಗೊಂಡ ಮಹಿಳೆಯರು, ನಗರಸಭೆಯ ಕಾರ್ಮಿಕರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಅಲ್ಲದೆ, ಕನ್ನಡಪರ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

ನಗರಸಭೆಯ ಸಿಬ್ಬಂದಿಗೆ ಚಳಿ ಬಿಡಿಸಿದ ಮಹಿಳೆ

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ನಗರಸಭೆಯ ಸಿಬ್ಬಂದಿವೋರ್ವರನ್ನು ಮಹಿಳೆ ತರಾಟೆಗೆ ತೆಗೆದುಕೊಂಡರು. ನಿತ್ಯ ಕಸ ಒಯ್ಯಲು ನಿಮಗೆ ಏನು ಸಮಸ್ಯೆ ಎಂದು ಪ್ರಶ್ನಿಸಿದರು.

ABOUT THE AUTHOR

...view details