ಕರ್ನಾಟಕ

karnataka

ETV Bharat / state

ಗಂಗಾವತಿ: ಸಂಕಷ್ಟಕ್ಕೆ ಕರಗಿದ ಮಹಿಳೆ, ನೂರಾರು ಜನರಿಗೆ ಆಹಾರ ವಿತರಣೆ - ವಿಜಯಲಕ್ಷ್ಮಿ ಗದ್ದಿ ಎಂಬ ಮಹಿಳೆ

ಮುಖ್ಯವಾಗಿ ಬಡವರು, ನಿರ್ಗತಿಕರು, ಬೀದಿಬದಿಯ ನಿರಾಶ್ರಿತರನ್ನೇ ಗುರಿಯಾಗಿಸಿಕೊಂಡು ಆಹಾರ ನೀಡಲಾಗುತ್ತಿದೆ. ಎಲ್ಲಿಯೂ ಹೋಟೆಲ್, ಚಹಾದಂಗಡಿ ಆರಂಭವಾಗಿಲ್ಲ. ಇದ್ದರೂ ಜನರಿಗೆ ಹಣದ ಸಮಸ್ಯೆಯಿಂದಾಗಿ ದಿನಕ್ಕೆ ಎರಡು ಹೊತ್ತು ಆಹಾರ ನೀಡುವ ಉದ್ದೇಶವಿದೆ ಎಂದು ವಿಜಯಲಕ್ಷ್ಮಿ ತಿಳಿಸಿದರು.

women-giving-food-for-who-soofring-lockdown
ನೂರಾರು ಜನರಿಗೆ ಆಹಾರ ವಿತರಣೆ

By

Published : May 13, 2021, 3:24 PM IST

ಗಂಗಾವತಿ:ಕೊರೊನಾ ಲಾಕ್​​ಡೌನ್ ಜನಸಾಮಾನ್ಯರನ್ನು ಎಂತಹ ಕಷ್ಟಕ್ಕೆ ದೂಡುತ್ತದೆ ಎಂದರೆ ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಹಸಿವಿನ ತೀವ್ರತೆ ಅರಿತಿರುವ ನಗರದ ಮಹಿಳೆಯೊಬ್ಬರು ನೂರಾರು ಜನರಿಗೆ ಅನ್ನ ವಿತರಿಸುವ ಮೂಲಕ ಮಾದರಿಯಾಗಿದ್ದಾರೆ.

ನೂರಾರು ಜನರಿಗೆ ಆಹಾರ ವಿತರಣೆ

ಓದಿ: ರಾಜಧಾನಿಯಿಂದ ಗಂಟುಮೂಟೆ ಸಮೇತ ಊರಿಗೆ ಹೊರಟ ಜನತೆ

ವಿಜಯಲಕ್ಷ್ಮಿ ಗದ್ದಿ ಎಂಬ ಮಹಿಳೆ, ನಿತ್ಯ ನೂರಾರು ಆಹಾರದ ಪೊಟ್ಟಣಗಳನ್ನು ಹೊತ್ತು ನಗರದಲ್ಲಿ ಸಂಚರಿಸಿ ಅಗತ್ಯವಿದ್ದವರಿಗೆ ಸ್ಥಳಕ್ಕೆ ತೆರಳಿ ಆಹಾರ ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ಮುಖ್ಯವಾಗಿ ಬಡವರು, ನಿರ್ಗತಿಕರು, ಬೀದಿಬದಿಯ ನಿರಾಶ್ರಿತರನ್ನೇ ಗುರಿಯಾಗಿಸಿಕೊಂಡು ಆಹಾರ ನೀಡಲಾಗುತ್ತಿದೆ. ಎಲ್ಲಿಯೂ ಹೋಟೆಲ್, ಚಹಾದಂಗಡಿ ಆರಂಭವಾಗಿಲ್ಲ. ಇದ್ದರೂ ಜನರಿಗೆ ಹಣದ ಸಮಸ್ಯೆಯಿಂದಾಗಿ ದಿನಕ್ಕೆ ಎರಡು ಹೊತ್ತು ಆಹಾರ ನೀಡುವ ಉದ್ದೇಶವಿದೆ ಎಂದು ವಿಜಯಲಕ್ಷ್ಮಿ ತಿಳಿಸಿದರು.

ABOUT THE AUTHOR

...view details