ಕೊಪ್ಪಳ: ರಸ್ತೆ ಬಂದ್ ಮಾಡಿದ್ದರಿಂದ ಬ್ಯಾರಿಕೇಡ್ ತೆಗೆಯುವಂತೆ ಯುವತಿಯೊಬ್ಬಳು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಘಟನೆ ನಗರದ ಅಶೋಕ ಸರ್ಕಲ್ ಬಳಿ ನಡೆದಿದೆ.
ಬ್ಯಾರಿಕೇಡ್ ತೆಗೆಯುವಂತೆ ಒತ್ತಾಯ: ಪೊಲೀಸರೊಂದಿಗೆ ಯುವತಿ ವಾಗ್ವಾದ - koppal
ಯುವತಿಯೊಬ್ಬಳು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಘಟನೆ ನಗರದ ಅಶೋಕ ಸರ್ಕಲ್ ಬಳಿ ನಡೆದಿದೆ.

ಪೊಲೀಸರೊಂದಿಗೆ ಯುವತಿ ವಾಗ್ವಾದ
ಪೊಲೀಸರೊಂದಿಗೆ ಯುವತಿ ವಾಗ್ವಾದ
10 ಗಂಟೆಯ ನಂತರ ಅನಗತ್ಯವಾಗಿ ಓಡಾಡುವ ಜನರನ್ನು ನಿಯಂತ್ರಿಸಲು ಪೊಲೀಸರು ನಗರದ ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಬ್ಯಾರಿಕೇಡ್ ತೆಗೆಯುವಂತೆ ವಾಹನ ಸವಾರರು ಒತ್ತಾಯ ಮಾಡುತ್ತಿದ್ದು, ಪೊಲೀಸರು ಹೈರಾಣಾಗುತ್ತಿದ್ದಾರೆ.
ಈ ಸಂದರ್ಭದಲ್ಲಿ ಯುವತಿಯೊಬ್ಬಳು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾಳೆ. ನಮಗೆ ಬೇರೆ ರಸ್ತೆ ಗೊತ್ತಿಲ್ಲ ಎಂದ ಯುವತಿಗೆ ನಾವು ರಸ್ತೆ ತೋರಿಸೋಕೆ ಆಗುತ್ತಾ ಎಂದು ಪೊಲೀಸರು ಗರಂ ಆಗಿದ್ದಾರೆ.