ಕೊಪ್ಪಳ :ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಧ್ಯರಾತ್ರಿ ಒಂಟಿ ಮಹಿಳೆಯೊಬ್ಬರು ಸಹಾಯ ಕೋರಿ ನಿಂತಿದ್ದು, ಸ್ಥಳೀಯರು ಮಹಿಳೆಯನ್ನು ರಕ್ಷಣೆ ಮಾಡಿ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ಮಾರುತಿ ವೃತ್ತದಲ್ಲಿ ನ. 8ರ ಬುಧವಾರ ತಡರಾತ್ರಿ ನಡೆದಿದೆ.
ಟ್ರಕ್ ಚಾಲಕನೊಬ್ಬ ಮಧ್ಯ ವಯಸ್ಕ ಮಹಿಳೆಯನ್ನ ಶೌಚಕ್ಕೆ ಇಳಿಸಿ, ಪುನಃ ಹತ್ತಿಸಿಕೊಳ್ಳದೇ ಆಕೆಯನ್ನು ಬಿಟ್ಟು ಹೋಗಿದ್ದಾನೆ. ಮಹಿಳೆಯನ್ನು ವಿಚಾರಿಸಿದಾಗ ಓಡಿಶಾ ಮೂಲದ ಮಹಿಳೆ ಸಂಗೀತಾ ಎಂಬುವುದನ್ನು ಹೇಳಿಕೊಂಡಿದ್ದು, ಆಕೆ, ಪತಿಯೊಂದಿಗೆ ಟ್ರಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ಶೌಚಕ್ಕೆ ಇಳಿಸಿ, ಚಾಲಕ ಹಾಗೂ ಪತಿ ಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾಳೆ. ರಸ್ತೆ ಮಧ್ಯೆ ಒಬ್ಬಂಟಿ ಮಹಿಳೆ ಚಡಪಡಿಸುತ್ತಾ ನಿಂತಿರುವುದನ್ನು ಗಮನಿಸಿದ ಸ್ಥಳೀಯರಾದ ಮರಸಣ್ಣ ತಾಳದ್, ಮಲ್ಲು ದೇಸಾಯಿ ಮತ್ತು ಸ್ನೇಹಿತರು ಮಹಿಳೆಯನ್ನ ರಕ್ಷಿಸಿದ್ದಾರೆ.