ಕೊಪ್ಪಳ: ಪತಿ ಹಣ ನೀಡಲಿಲ್ಲವೆಂದು ಕೋಪಗೊಂಡ ಪತ್ನಿಯೊಬ್ಬಳು ತನ್ನ ಮೂರು ತಿಂಗಳ ಮಗುವನ್ನು ಬಿಟ್ಟು ಹೋದ ಆರೋಪ ಕೇಳಿ ಬಂದಿದೆ.
ಅದೊಂದೇ ಕಾರಣಕ್ಕೆ ಪತಿ, ಕಂದನನ್ನೇ ಬಿಟ್ಟು ಹೋದಳಂತೆ ಪತ್ನಿ! - undefined
ಪತ್ನಿಯೊಬ್ಬಳು ತನ್ನ ಮೂರು ತಿಂಗಳ ಮಗು ಹಾಗೂ ಗಂಡನನ್ನು ಬಿಟ್ಟು ಹೋದ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ.
ಪತ್ನಿ
ಜಿಲ್ಲೆಯ ಗಂಗಾವತಿ ನಗರದಲ್ಲಿ ಈ ಆರೋಪ ಕೇಳಿಬಂದಿದ್ದು, ದ್ವಾರಕ್ ಎಂಬುವವರು ತಮ್ಮ ಪತ್ನಿ ವಿರುದ್ಧ ಈ ಆರೋಪ ಮಾಡಿದ್ದಾರೆ. ಕಂಪ್ಲಿ ಮೂಲದ ತನ್ನ ಪತ್ನಿ ಪದೇ ಪದೇ ಹಣಕ್ಕೆ ಪೀಡಿಸುತ್ತಿದ್ದಳು. ಈ ಬಾರಿ ಒಮ್ಮಿಂದೊಮ್ಮೆಲೇ ಎರಡು ಲಕ್ಷ ರೂಪಾಯಿ ಕೇಳಿದಳು. ಅಷ್ಟೊಂದು ಹಣವನ್ನು ನಾನು ಎಲ್ಲಿಂದ ತರಲಿ. ಹಣ ನೀಡದಿದ್ದಕ್ಕೆ ನನ್ನ ಪತ್ನಿ ಮೂರು ತಿಂಗಳ ಗಂಡು ಮಗುವನ್ನು ಬಿಟ್ಟು ಹೋಗಿದ್ದಾಳೆ ಎಂದು ಪತಿ ದ್ವಾರಕ್ ಆರೋಪಿದ್ದಾರೆ.
ಅಲ್ಲದೆ, ದ್ವಾರಕ್ ತಮ್ಮ ಮಗುವಿನೊಂದಿಗೆ ಗಂಗಾವತಿ ನಗರ ಠಾಣೆಗೆ ಬಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಪತ್ನಿಯ ನಡೆಯಿಂದ ದಿಕ್ಕು ತೋಚದಂತಾಗಿದೆ ಎಂದು ಅವಲತ್ತುಕೊಂಡಿದ್ದಾರೆ.