ಕೊಪ್ಪಳ:ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದೆ. ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಲಕ್ಷ್ಮಿ (26) ಅನುಮಾನಾಸ್ಪದವಾಗಿ ಮೃತಪಟ್ಟಿರುವ ಗೃಹಿಣಿ.
ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ... ಕೊಲೆ ಆರೋಪ - ಬಸಾಪುರ ಗ್ರಾಮ
ಗೃಹಿಣಿಯೋರ್ವಳು ಅನುಮಾನಾಸ್ಪದವಾಗಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೊಪ್ಪಳದ ಬಸಾಪುರ ಗ್ರಾಮದಲ್ಲಿ ನಡೆದಿದೆ.
ಗೃಹಿಣಿ ಶವ ಪತ್ತೆ
ಲಕ್ಷ್ಮಿ ಪತಿ ಮಂಜುನಾಥ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಮೃತ ಗೃಹಿಣಿಯ ಪೋಷಕರು ಆರೋಪಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮಂಜುನಾಥ ಜೊತೆ ಲಕ್ಷ್ಮಿ ಮದುವೆಯಾಗಿತ್ತು. ವರದಕ್ಷಿಣೆ ಕಿರುಕುಳ ಹಿನ್ನಲೆ ಕೌಟುಂಬಿಕ ಕಲಹವಿತ್ತು. ಹೀಗಾಗಿ ಇಂದು ಮನೆಯಲ್ಲಿ ಹಲ್ಲೆ ಮಾಡಿ ಬಳಿಕ ನೇಣು ಹಾಕಲಾಗಿದೆ ಎಂಬುದು ಲಕ್ಷ್ಮೀ ಪೋಷಕರ ಆರೋಪವಾಗಿದೆ.
ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.