ಕೊಪ್ಪಳ:ಬಿಡಾದಿ ದನಗಳ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮಹಿಳೆಯ ಶವವನ್ನು ನಗರಸಭೆಯ ಮುಂಭಾಗ ಇಟ್ಟು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಭಾನುವಾರ ಸಂಜೆ ನಗರದ 30 ನೇ ವಾಡ್೯ನ ದೇವರಾಜ್ ಕಾಲೋನಿ ನಿವಾಸಿ ರಮೀಜಾ ಬೇಗಂ (44) ಎಂಬವರು ಬಹಿರ್ದೆಸೆಗೆ ತೆರಳಿದ್ದರು. ಈ ಸಂದರ್ಭ ಬಿಡಾಡಿ ದನಗಳ ಗುಂಪು ದಾಳಿ ಮಾಡಿದೆ. ಈ ಸಂದರ್ಭ ಮಹಿಳೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.