ಕರ್ನಾಟಕ

karnataka

ETV Bharat / state

ವಿದ್ಯುತ್ ಸ್ವರ್ಶಿಸಿ ಜಮಲಾಪುರ ತಾಲೂಕು ಪಂಚಾಯತ್​ ಸದಸ್ಯೆ ಸಾವು - death news of koppala

ವಿದ್ಯುತ್ ಸ್ಪರ್ಶಿಸಿ ಜಮಲಾಪುರ ತಾಲೂಕು ಪಂಚಾಯತ್ ಕ್ಷೇತ್ರದ ಸದಸ್ಯೆಯಾಗಿದ್ದ ಸರಸ್ವತಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದಿದೆ.

ವಿದ್ಯುತ್ ಸ್ವರ್ಶಿಸಿ ಮಹಿಳೆಯೋರ್ವಳ ದುರ್ಮರಣ

By

Published : Sep 19, 2019, 10:30 PM IST

ಕೊಪ್ಪಳ: ವಿದ್ಯುತ್ ಸ್ಪರ್ಶಿಸಿ ತಾಲೂಕು ಪಂಚಾಯತ್ ಸದಸ್ಯೆವೋರ್ವರು ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಮಲಾಪುರ ಗ್ರಾಮದಲ್ಲಿ, ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ. ತಾಲೂಕು ಪಂಚಾಯತ್ ಸದಸ್ಯೆ ಸರಸ್ವತಿ ವೀರೇಶ ಗಂಗನಾಳ (40) ಮೃತರು.

ಜಮಲಾಪುರ ತಾಲೂಕು ಪಂಚಾಯತ್ ಕ್ಷೇತ್ರದ ಸದಸ್ಯೆಯಾಗಿದ್ದ ಸರಸ್ವತಿ ಅವರು ತಮ್ಮ ಅಂಗಡಿಗೆ ಹೋಗಿದ್ದಾಗ ವಿದ್ಯುತ್ ಸ್ವರ್ಶಿಸಿ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details