ಕರ್ನಾಟಕ

karnataka

ETV Bharat / state

'ದೇವರಿಗೆ ಸೂಜಿ ಚುಚ್ಚಬೇಡಿ..': ಲಸಿಕೆ ಹಾಕುವಾಗ ಮೈಮೇಲೆ ದೇವರು ಬಂದಂತೆ ಮಹಿಳೆ ರಂಪಾಟ - Covid Vaccine awareness campaign in koppal

ಕೊಪ್ಪಳ ಜಿಲ್ಲೆಯಲ್ಲಿ ವ್ಯಾಕ್ಸಿನ್ ಹಾಕುವ ವೇಳೆ ಮಹಿಳೆಯೊಬ್ಬರು ಮೈ ಮೇಲೆ ದೇವರು ಬಂದಂತೆ ನಟಿಸಿ, ದೇವರಿಗೆ ಸೂಜಿ ಚುಚ್ಚಬಾರದು ಎಂದು ಚಿರಾಟ ನಡೆಸಿದ ಘಟನೆ ನಡೆಯಿತು.

koppal
ಮೈಮೇಲೆ ದೇವರು ಬಂದಂತೆ ರಂಪಾಟ ಮಾಡಿದ ಮಹಿಳೆ

By

Published : Dec 2, 2021, 1:37 PM IST

ಕೊಪ್ಪಳ: ಕೊರೊನಾ ಲಸಿಕೆ ಕುರಿತು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಕೂಡ ಕೆಲವರಿಗೆ ಅದರಲ್ಲಿಯೂ ಗ್ರಾಮೀಣ ಪ್ರದೇಶದ ಜನರಿಗೆ ಲಸಿಕೆಯ ಕುರಿತು ಇನ್ನೂ ಭಯ ಹೋಗಿಲ್ಲ. ಆದ್ದರಿಂದ ಕಾರ್ಯಕರ್ತರು ಎಷ್ಟೇ ಹರಸಾಹಸಪಟ್ಟರೂ ಸಹ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುವ ಜತೆಗೆ ರಗಳೆ, ರಂಪಾಟ ಮಾಡುತ್ತಿದ್ದಾರೆ.

ಕೊಪ್ಪಳ ಡಿಸಿ, ಜಿ.ಪಂ ಸಿಇಒ ಅವರಿಂದ ಲಸಿಕೆಯ ಕುರಿತು ಜಾಗೃತಿ ಕಾರ್ಯ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಲಸಿಕೆ ಹಾಕಲು ಮುಂದಾದಾಗ ಮೈಮೇಲೆ ದೇವರು ಬಂದಂತೆ ಮಹಿಳೆಯೊಬ್ಬಳು ರಂಪಾಟ ಮಾಡಿದ್ದಾಳೆ. ದೇವರಿಗೆ ಸೂಜಿ ಚುಚ್ಚ ಬಾರದು ಎಂದು ಚಿರಾಟ ನಡೆಸಿ ಮನ ಬಂದಂತೆ‌ ಕುಣಿದಾಡಿದ್ದಾಳೆ.

ಮೈಮೇಲೆ ದೇವರು ಬಂದಂತೆ ರಂಪಾಟ ಮಾಡಿದ ಮಹಿಳೆ

ಜಿಲ್ಲೆಯ ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾಮದ ಯಂಕಮ್ಮ ಎಂಬಾಕೆ ರಂಪಾಟ ಮಾಡಿದ್ದು, ಕೊನೆಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮಹಿಳೆಯ ಮನವೊಲಿಸಿ ಲಸಿಕೆ ಹಾಕಿದ್ದಾರೆ.

ABOUT THE AUTHOR

...view details