ಕರ್ನಾಟಕ

karnataka

ETV Bharat / state

ಖಾಸಗಿ ಮದ್ಯದಂಗಡಿಗಳಲ್ಲಿ ಬಹುಬೇಗನೇ ಖಾಲಿ.. ತೀರ್ಥ ಸಿಗದೆ 'ಮಧು'ಮಕ್ಕಳ ಪರದಾಟ!! - Gangavathi wine Sales

ಸುಮಾರು 500 ಮೀಟರ್ ಅಂದರೆ ಅರ್ಧ ಕಿ.ಮೀ ದೂರದವರೆಗೆ ಜನ ಬಿಸಿಲಿನಲ್ಲಿ ಮದ್ಯಕ್ಕಾಗಿ ನಿಂತಿದ್ದರು.

wine shops
ಮದ್ಯ ಸಿಗದೆ ಪರದಾಡಿದ ಗ್ರಾಹಕರು

By

Published : May 5, 2020, 9:15 AM IST

ಗಂಗಾವತಿ :ಮದ್ಯ ಮಾರಾಟಕ್ಕೆ ಮೊದಲ ಬಾರಿಗೆ ಅವಕಾಶ ನೀಡಿದ ಬಳಿಕ ನಗರದ ಬಹುತೇಕ ಖಾಸಗಿ ಅಂಗಡಿಗಳಲ್ಲಿ ಬಹುಬೇಗನೇ ಮದ್ಯ ಖಾಲಿಯಾದ ಪರಿಣಾಮ ಸಕಾಲಕ್ಕೆ ಮದ್ಯ ಸಿಗದೆ ಗ್ರಾಹಕರು ಪರದಾಡಿದ ಪ್ರಸಂಗ ನಗರದಲ್ಲಿ ನಡೆಯಿತು.

ರಾಯಚೂರು ರಸ್ತೆಯಲ್ಲಿರುವ ರಿಲಾಯನ್ಸ್ ಪೆಟ್ರೋಲ್ ಬಂಕ್ ಎದುರು ಇರುವ ಎಂಎಸ್ಐಎಲ್ ಮದ್ಯದಂಗಡಿ ಮುಂದೆ ಮಾತ್ರ ಜನ ಜಂಗುಳಿ ವಿಪರೀತವಾಗಿದೆ. ಸುಮಾರು 500 ಮೀಟರ್ ಅಂದರೆ ಅರ್ಧ ಕಿ.ಮೀ ದೂರದವರೆಗೆ ಜನ ಬಿಸಿಲಿನಲ್ಲಿ ಮದ್ಯಕ್ಕಾಗಿ ನಿಂತಿದ್ದರು.

ಸಂಜೆ ಏಳು ಗಂಟೆಗೆ ಎಂಎಸ್ಐಎಲ್​​ನಲ್ಲೂ ಸ್ಟಾಕ್ ಖಾಲಿಯಾದ ಪರಿಣಾಮ ಹಲವರು ಅಸಮಾಧಾನಗೊಂಡರು. ಕೆಲವರು ಎರಡೆರಡು ಬಾರಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದರೆ ಕೆಲವರಿಗೆ ಮದ್ಯವೇ ಸಿಗಲಿಲ್ಲ.

ABOUT THE AUTHOR

...view details