ಗಂಗಾವತಿ:ಕಾಂಗ್ರೆಸ್ ಪಾಳೆಯಕ್ಕೆ ಜಂಪ್ ಆಗಿರುವ ಬಿಜೆಪಿಯ ಗಂಗಾವತಿ ನಗರಸಭಾ ಸದಸ್ಯೆ ಸುಧಾ ಸೋಮನಾಥ ಅವರ ಮನೆಗೆ ತೆರಳಿದ ಬಿಜೆಪಿ ಪಕ್ಷದ ಪದಾಧಿಕಾರಿಗಳು ಮನೆಯ ಬಾಗಿಲಿಗೆ ವಿಪ್ ನೋಟೀಸ್ ಪ್ರತಿ ಅಂಟಿಸಿದ್ದಾರೆ.
ಗಂಗಾವತಿ: 'ಕೈ'ವಶವಾದ ಸದಸ್ಯೆಯ ಮನೆ ಬಾಗಿಲಿಗೆ ಕಮಲದ ವಿಪ್.. - whip from BJP to the doorstep of Congress member
ಪಕ್ಷದಿಂದ ಜಯಶ್ರೀ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನಿಯೋಜಿಸಲಾಗಿದ್ದು, ಪಕ್ಷದ ಸೂಚನೆ ಮೇರೆಗೆ ನಾವು ಸೂಚಿಸುವ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದಾರೆ.
'ಕೈ'ವಶವಾದ ಸದಸ್ಯೆಯ ಮನೆ ಬಾಗಿಲಿಗೆ ಕಮಲದ ವಿಪ್
ಪಕ್ಷದಿಂದ ಜಯಶ್ರೀ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನಿಯೋಜಿಸಲಾಗಿದ್ದು, ಪಕ್ಷದ ಸೂಚನೆ ಮೇರೆಗೆ ನಾವು ಸೂಚಿಸುವ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದಾರೆ.
ಮನೆಗೆ ತೆರಳಿದ ಬಿಜೆಪಿಗರಿಗೆ ಸದಸ್ಯೆ ಸಿಗದ ಹಿನ್ನೆಲೆ ನಗರ ಘಟಕದ ಅಧ್ಯಕ್ಷ ಕಾಶಿನಾಥ ಚಿತ್ರಗಾರ ನೇತೃತ್ವದಲ್ಲಿ ಸದಸ್ಯೆಯ ಮನೆ ಬಾಗಿಲಿಗೆ ಪಕ್ಷದ ವಿಪ್ ಪತ್ರವನ್ನು ಲಗತ್ತಿಸಲಾಗಿದೆ. ಈ ಬಗ್ಗೆ ಸದಸ್ಯೆಯ ಕುಟುಂಬ ಸದಸ್ಯರಿಗೂ ಮಾಹಿತಿ ನೀಡಲಾಗಿದೆ ಎಂದು ಪಕ್ಷ ತಿಳಿಸಿದೆ.