ಕುಷ್ಟಗಿ (ಕೊಪ್ಪಳ): ಮಸ್ಕಿ ವಿಧಾನಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರ ಆಸ್ತಿ ಮೊದಲು ಎಷ್ಟಿತ್ತು ಹಾಗು ಸದ್ಯ ಎಷ್ಟಿದೆ ಎನ್ನುವ ಲಿಸ್ಟ್ ನಮ್ಮಲ್ಲಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಪ್ರತಾಪಗೌಡ ಪಾಟೀಲರ ಆಸ್ತಿ ವಿವರವನ್ನು ಮತದಾರರಿಗೆ ತಲುಪಿಸುತ್ತೇವೆ: ಶಾಸಕ ಬಯ್ಯಾಪೂರ - ಕುಷ್ಟಗಿ ಕೊಪ್ಪಳ ಲೇಟೆಸ್ಟ್ ನ್ಯೂಸ್
ಬಿಜೆಪಿಯ ಪ್ರತಾಪಗೌಡ ಪಾಟೀಲ ಅವರ ಬಳಿ ಈ ಹಿಂದೆ ಇದ್ದ ಹಾಗು ಈಗಿರುವ ಹೊಲ, ಮನೆ, ಆಸ್ತಿಯ ವಿವರ ಎಷ್ಟಿದೆ ಎನ್ನುವ ವಿವರ ನಮ್ಮ ಬಳಿ ಇದೆ. ಇದನ್ನು ಮತದಾರರಿಗೆ ತಲುಪಿಸುತ್ತೇವೆಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದ್ದಾರೆ.
ಮಸ್ಕಿ ವಿಧಾನಸಭಾ ಕ್ಷೇತ್ರದ ಜಕ್ಕೇರಮಡು ತಾಂಡದ ದೇವಿ ದೇವಸ್ಥಾನದ ಸನ್ನಿಧಿಯಲ್ಲಿ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಬಸನಗೌಡ ತುರವಿಹಾಳ ಪರ ಮಾತನಾಡಿದ ಸಂದರ್ಭ ಈ ಹೇಳಿಕೆ ನೀಡಿದರು. ಚುನಾವಣೆಯಲ್ಲಿ ಹಣ ಕೊಡಲು ನಮ್ಮಿಂದಾಗದು. ನಮ್ಮ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಅವರ ಬಳಿ ಹಣ ಇಲ್ಲ, ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರ ಬಳಿ ಹಣ ಇದೆ. ಪ್ರತಾಪಗೌಡ ಪಾಟೀಲ ಅವರ ಬಳಿ ಈ ಹಿಂದೆ ಇದ್ದ ಹಾಗು ಈಗಿರುವ ಹೊಲ, ಮನೆ, ಆಸ್ತಿಯ ವಿವರ ಎಷ್ಟಿದೆ ಎನ್ನುವ ವಿವರ ನಮ್ಮ ಬಳಿ ಇದೆ. ಅದರ ಪ್ರತಿ ನಿಮ್ಮ ಕೈಗೆ ಕೊಡಲಾಗುವುದು ಎಂದರು.
ನಮ್ಮ ಅಭ್ಯರ್ಥಿ ಬಸನಗೌಡ ತುರವಿಹಾಳ ಅವರ ಆಸ್ತಿ ಈಗ ಕಡಿಮೆಯಾಗಿದ್ದು, ವ್ಯತ್ಯಾಸ ನೋಡಿ ಎಂದರು. ನಾನು ನಿಮ್ಮ ಮೂಲಕ ಕಾಂಗ್ರೆಸ್ ಪಕ್ಷ ಗೆಲ್ಲಿಸುವ ವಾಗ್ದಾನ ಮಾಡಿದ್ದೇನೆ, ಸುಳ್ಳು ಹೇಳುವ ಜಾಯಮಾನ ನನ್ನದಲ್ಲ ಎಂದು ಬಯ್ಯಾಪುರ ಹೇಳಿರುವ ವಿಡಿಯೋ ಇದೀಗ ಕುಷ್ಟಗಿಯಲ್ಲಿ ವೈರಲ್ ಆಗಿದೆ.