ಕೊಪ್ಪಳ: ಕೇಂದ್ರದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಜಿಲ್ಲೆಯ ಬಿಜೆಪಿ ಮುಖಂಡರು ಸಂತಾಪ ಸೂಚಿಸಿದ್ದಾರೆ.
ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿದ ಬಿಜೆಪಿ ನಾಯಕರು
ಅರುಣ್ ಜೇಟ್ಲಿ ನಿಧನ ಕೇವಲ ಪಕ್ಷಕ್ಕಷ್ಟೇ ಅಲ್ಲ ದೇಶಕ್ಕೆ ತುಂಬಲಾಗದ ನಷ್ಟ. ರಾಜಕೀಯ, ಕಾನೂನು, ಆರ್ಥಿಕತೆಯ ಬಗ್ಗೆ ಆಳವಾಗಿ ತಿಳಿಕೊಂಡವರು. ತುರ್ತು ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದವರು ಎಂದು ಬಿಜೆಪಿ ನಾಯಕರು ಸ್ಮರಿಸಿದರು.
ರಾಜ್ಯದೊಂದಿಗೆ ಅರುಣ್ ಜೇಟ್ಲಿ ಇಟ್ಟುಕೊಂಡಂತh ಸಂಬಂಧವನ್ನು ಎಲ್ಲರೂ ಮೆಲಕು ಹಾಕಿದರು. ಸಂಸದ ಸಂಗಣ್ಣ ಕರಡಿ, ಕನಕಗಿರಿ ಶಾಸಕ ಬಸವರಾಜ ದಡೇಸುಗೂರು, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಕುಷ್ಟಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಜೇಟ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದ್ದಾರೆ.
ಅರುಣ್ ಜೇಟ್ಲಿ ನಿಧನ ರಾಷ್ಟ್ರಕ್ಕೆ ತುಂಬಲಾರದ ನಷ್ಟ. ಒಳ್ಳೆಯ ವಿತ್ತ ತಜ್ಞ, ಕಾನೂನು ತಜ್ಞರನ್ನು ದೇಶ ಕಳೆದುಕೊಂಡಿದೆ. ಪಕ್ಷದ ಸಂಘಟನೆಯಲ್ಲಿ ಅವರ ಪಾತ್ರ ದೊಡ್ಡದು. ತುರ್ತು ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ್ದರು. ಇಂತಹ ಧೀಮಂತ ನಾಯಕನ ಅಗಲಿಕೆ ನೋವು ತಂದಿದೆ ಎಂದು ಸ್ಮರಿಸಿದರು.