ಕರ್ನಾಟಕ

karnataka

ETV Bharat / state

ಸದಾಶಿವ ಆಯೋಗದ ವರದಿ ಜಾರಿಗೆ ನಾವು ಒಪ್ಪಲ್ಲ: ಪ್ರಭು ಚವ್ಹಾಣ್ - ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್

ಸದಾಶಿವ ಆಯೋಗದ ವರದಿ ಜಾರಿಯಿಂದ ಎಸ್​ಸಿಗೆ ಸೇರಿರುವ ಇತರ ಉಪಜಾತಿಗಳಿಗೆ ಅನ್ಯಾಯವಾಗುತ್ತದೆ. ಈ ಹಿನ್ನೆಲೆ, ಆ ವರದಿಯನ್ನು ನಾವು ಒಪ್ಪಲ್ಲ ಎಂದು ಸಚಿವ ಪ್ರಭು ಚವ್ಹಾಣ್​​ ಹೇಳಿದ್ದಾರೆ.

ಪ್ರಭು ಚವ್ಹಾಣ್
ಪ್ರಭು ಚವ್ಹಾಣ್

By

Published : Aug 31, 2021, 6:57 PM IST

ಕೊಪ್ಪಳ: ಸದಾಶಿವ ಆಯೋಗದ ವರದಿಯನ್ನು ನಾವು ಒಪ್ಪುವುದಿಲ್ಲ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್​​ ಹೇಳಿದ್ದಾರೆ.

ಸದಾಶಿವ ಆಯೋಗದ ವರದಿ ಜಾರಿಗೆ ನಾವು ಒಪ್ಪಲ್ಲ: ಪ್ರಭು ಚವ್ಹಾಣ್

ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದ ಬಳಿಯ ಲಂಬಾಣಿ ಸಮುದಾಯದ ಸಂತ ಹಾತಿರಾಂ ಬಾವಾಜಿ ಕಟ್ಟೆಯ ದರ್ಶನ ಪಡೆದ ಬಳಿಕ ಅವರು ಮಾತನಾಡಿದರು. ನಮ್ಮ‌ ದೇಶದ ಸಂವಿಧಾನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಲಂಬಾಣಿ, ‌ಕೊರವ, ಕೊರಚರನ್ನು ಎಸ್​ಸಿಗೆ ಸೇರಿಸಿದ್ದಾರೆ. ಸದಾಶಿವ ಆಯೋಗದ ವರದಿ ಜಾರಿಯಿಂದ ಈ ಸಮುದಾಯಗಳಿಗೆ ಅನ್ಯಾಯವಾಗುತ್ತದೆ‌. ರಾಜ್ಯದಲ್ಲಿ ನಮ್ಮ ಸರ್ಕಾರವಿದೆ. ಈ ಸಮುದಾಯಗಳಿಗೆ ಅನ್ಯಾಯವಾಗುವುದಿಲ್ಲ ಎಂಬ ನಂಬಿಕೆ ನನಗಿದೆ. ಸದಾಶಿವ ಆಯೋಗ ವರದಿ ಜಾರಿಗೆ ನಾವು ಒಪ್ಪುವುದಿಲ್ಲ ಎಂದರು.

ಇದನ್ನೂ ಓದಿ: ಕಳೆದ ಬಾರಿ ಮೈತ್ರಿ ಸರ್ಕಾರ ಪತನ, ಈಗ ಏನು ತಂತ್ರ: ಸಿದ್ದರಾಮಯ್ಯ ಕಾಲೆಳೆದ ಬಿಜೆಪಿ..!

ಗಣೇಶೋತ್ಸವ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಉನ್ನತಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ನಮ್ಮ ಸಿಎಂ ಪವರ್ ಫುಲ್ ಹಾಗೂ ಇಂಟಲಿಜೆಂಟ್ ಇದ್ದಾರೆ‌. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ಹ್ಯಾಂಡಲ್ ಮಾಡುತ್ತಾರೆ ಎಂದರು.

ಅಲ್ಲದೇ ನಾನು ಪಶು ಸಂಗೋಪನೆ ಇಲಾಖೆಯ ಸಚಿವ. ನನ್ನ ಇಲಾಖೆ ಪ್ರಗತಿ ಪರಿಶೀಲನೆ, ಗೋ ಶಾಲೆಗೆ ಭೇಟಿ ನೀಡುತ್ತೇನೆ.‌ ಗೋಹತ್ಯೆ ನಿಷೇಧ ಕಾನೂನು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ABOUT THE AUTHOR

...view details