ಕೊಪ್ಪಳ:ಏಪ್ರಿಲ್ 10ರವರೆಗೆ ತುಂಗಭದ್ರಾ ಎಡದಂಡೆಯ ಮುಖ್ಯ ಕಾಲುವೆಗೆ ನೀರು ಹರಿಸುವ ಮೂಲಕ ರೈತರು ಬೆಳೆಯುವ 2ನೇ ಬೆಳೆಗೆ ನೀರು ನೀಡಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.
ಏಪ್ರಿಲ್ 10ರವರೆಗೆ 2ನೇ ಬೆಳೆಗೆ ನೀರು ನೀಡಲಾಗುವುದು.. ಶಾಸಕ ಪರಣ್ಣ ಅಭಯ - Water will be supplied to the second crop till April 10
ಏಪ್ರಿಲ್ ಹತ್ತರವರೆಗೆ ತುಂಗಭದ್ರಾ ಎಡದಂಡೆಯ ಮುಖ್ಯ ಕಾಲುವೆಗೆ ನೀರು ಹರಿಸುವ ಮೂಲಕ ರೈತರು ಬೆಳೆಯುವ 2ನೇ ಬೆಳೆಗೆ ನೀರು ನೀಡಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.
ಶಾಸಕ ಪರಣ್ಣ ಮುನವಳ್ಳಿ
ಏಪ್ರಿಲ್ 10ರವರೆಗೆ 2ನೇ ಬೆಳೆಗೆ ನೀರು ನೀಡಲಾಗುತ್ತೆ.. ಶಾಸಕ ಪರಣ್ಣ ಅಭಯ
ಈ ಬಗ್ಗೆ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 30ರವರೆಗೆ ನೀರು ಬಿಡುವ ಬಗ್ಗೆ ಐಸಿಸಿ ಸಭೆಯಲ್ಲಿಯೇ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ಹೆಚ್ಚುವರಿ ನೀರು ಅಂದರೆ ಏಪ್ರಿಲ್ವರೆಗೂ ಬಿಡಬೇಕು ಎಂಬ ಆಗ್ರಹ ರೈತರಿಂದ ಕೇಳಿ ಬಂದಿತ್ತು. ಈ ಹಿನ್ನೆಲೆ ಹೆಚ್ಚುವರಿ ನೀರು ಬಿಡುವ ಬಗ್ಗೆ ಜನವರಿಯಲ್ಲಿ ಸಭೆ ಕರೆದು ಮೊತ್ತೊಮ್ಮೆ ಈ ಬಗ್ಗೆ ನಿರ್ಣಯ ಕೈಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು.
ಆದರೆ, ಈಗ ಯಾವ ಕಾರಣಕ್ಕೂ ರೈತರು ಆತಂಕ ಪಡುವ ಅಗತ್ಯವಿಲ್ಲ. ಏಪ್ರಿಲ್ 10ರವರೆಗೆ ಖಚಿತವಾಗಿ ನೀರು ಬಿಡಲಾಗುವುದು ಎಂದರು.