ಕೊಪ್ಪಳ :ತುಂಗಭದ್ರಾ ಎಡದಂಡೆ ಸೇರಿದಂತೆ ವಿವಿಧ ನಾಲೆಗಳಿಗೆ ಜುಲೈ 18ರಿಂದ ಲಭ್ಯತೆಯ ಆಧಾರದ ಮೇಲೆ ನೀರು ಹರಿಸಲು ತೀರ್ಮಾನಿಸಲಾಗಿದೆ. ತುಂಗಭದ್ರಾ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸುವ ಕುರಿತಂತೆ ತಾಲೂಕಿನ ಮುನಿರಾಬಾದ್ನ ಕಾಡಾ ಕಚೇರಿಯಲ್ಲಿ ಸಚಿವ ಆನಂದ್ ಸಿಂಗ್ ಅಧ್ಯಕ್ಷತೆಯಲ್ಲಿ ಇಂದು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಜುಲೈ 18ರಿಂದ ತುಂಗಭದ್ರಾ ವಿವಿಧ ಕಾಲುವೆಗಳಿಗೆ ನೀರು - ತುಂಗಭದ್ರಾ ಕಾಲುವೆಗಳಿಗೆ ನೀರು
ತುಂಗಭದ್ರಾ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸುವ ಕುರಿತಂತೆ ತಾಲೂಕಿನ ಮುನಿರಾಬಾದ್ನ ಕಾಡಾ ಕಚೇರಿಯಲ್ಲಿ ಸಚಿವ ಆನಂದ್ ಸಿಂಗ್ ಅಧ್ಯಕ್ಷತೆಯಲ್ಲಿ ಇಂದು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ..
![ಜುಲೈ 18ರಿಂದ ತುಂಗಭದ್ರಾ ವಿವಿಧ ಕಾಲುವೆಗಳಿಗೆ ನೀರು Water Supply to various canals of Tungabhadra from 18th July](https://etvbharatimages.akamaized.net/etvbharat/prod-images/768-512-12435470-thumbnail-3x2-abc.jpg)
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜುಲೈ 18ರಿಂದ ನವೆಂಬರ್ 30ರವರೆಗೆ 4,100 ಕ್ಯೂಸೆಕ್‌ನಂತೆ ಅಥವಾ ನೀರಿನ ಲಭ್ಯತೆ ಆಧಾರದ ಮೇಲೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಇನ್ನು, ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜುಲೈ 18ರಿಂದ ನವೆಂಬರ್ 30ರವರೆಗೆ 1,130 ಕ್ಯೂಸೆಕ್, ಬಲದಂಡೆ ಕೆಳಮಟ್ಟದ ಕಾಲುವೆಗೆ ಜುಲೈ 18ರಿಂದ ನವೆಂಬರ್ 30ರವರೆಗೆ 700 ಕ್ಯೂಸೆಕ್ ನಂತೆ, ರಾಯ ಬಸವಣ್ಣ ಕಾಲುವೆಗೆ ಜೂನ್ 6ರಿಂದ ಡಿಸೆಂಬರ್ 10ರವರೆಗೆ 235 ಕ್ಯೂಸೆಕ್, ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜುಲೈ 18ರಿಂದ ನವೆಂಬರ್ 30ರವರೆಗೆ 25 ಕ್ಯೂಸೆಕ್‌ನಂತೆ ಅಥವಾ ನೀರಿನ ಲಭ್ಯತೆ ಆಧಾರದ ಮೇಲೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇದನ್ನೂ ಓದಿ : ಉದ್ಯೋಗಾಕಾಕ್ಷಿಂಗಳಿಗೆ ಸಿಹಿ ಸುದ್ದಿ : ಪೊಲೀಸ್ ಇಲಾಖೆಯಲ್ಲಿ ಹೊಸ ಹುದ್ದೆ ಸೃಷ್ಟಿಸಿದ ಸರ್ಕಾರ