ಕೊಪ್ಪಳ:ಜಿಂದಾಲ್ ಕಾರ್ಖಾನೆಗೆ ನೀರು ಪೂರೈಕೆಯಾಗುತ್ತಿರುವ ಪೈಪ್ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗುತ್ತಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.
ಜಿಂದಾಲ್ ಕಾರ್ಖಾನೆಗೆ ನೀರು ಪೂರೈಕೆಯಾಗುತ್ತಿದ್ದ ಪೈಪ್ ಒಡೆದು ನೀರು ಪೋಲು - ಪೈಪ್ ಲೈನ್
ಜಿಂದಾಲ್ ಕಾರ್ಖಾನೆಗೆ ನೀರು ಪೂರೈಕೆಯಾಗುತ್ತಿರುವ ಪೈಪ್ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗುತ್ತಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.

ಜಿಲ್ಲೆಯ ಕುಷ್ಟಗಿ ಹೊರವಲಯದ ಪಾಲಿಟೆಕ್ನಿಕ್ ಬಳಿಯಿರುವ ಗುರಪ್ಪ ಕೋತ್ನಿ ಹಾಗೂ ಅಮರೇಶ ಕಲಕಬಂಡಿ ಎಂಬುವರ ಜಮೀನಿನಲ್ಲಿ ಈ ಪೈಪ್ ಲೈನ್ ಒಡೆದಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಆಲಮಟ್ಟಿ ಜಲಾಶಯದಿಂದ ಜಿಂದಾಲ್ ಕಾರ್ಖಾನೆಗೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಇದಾಗಿದ್ದು, ಕಳೆದ 10 ವರ್ಷದಿಂದ ಜಿಂದಾಲ್ ಕಾರ್ಖಾನೆಗೆ ನೀರು ಸರಬರಾಜಾಗುತ್ತಿದೆ.
ಕಳೆದ ಎರಡು ತಿಂಗಳ ಹಿಂದೆ ಕುಷ್ಟಗಿ ಹೊರವಲಯದಲ್ಲಿ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಅಲ್ಲದೆ ರೈತರು ಬಿತ್ತನೆ ಮಾಡಿದ್ದ ಬೆಳೆ ಹಾಳಾಗಿತ್ತು. ಇದೀಗ ಮತ್ತೆ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಪದೇ ಪದೆ ಈ ರೀತಿ ಪೈಪ್ ಒಡೆಯುತ್ತಿರೋದ್ರಿಂದ ಜಮೀನು ಹಾಳಾಗಿ ರೈತರಿಗೆ ನಷ್ಟವಾಗುತ್ತಿದೆ. ಕೂಡಲೇ ಜಿಂದಾಲ್ ಕಾರ್ಖಾನೆಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.