ಗಂಗಾವತಿ:ಕನಕಗಿರಿ ತಾಲೂಕಿನ ನವಲಿ ಬಳಿ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಸಮತೋಲನ ಜಲಾಶಯದ ಸ್ಥಳದ ವೀಕ್ಷಣೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಶನಿವಾರ ತಾಲೂಕಿಗೆ ಭೇಟಿ ನೀಡಲಿದ್ದಾರೆ.
ಸಮತೋಲನ ಜಲಾಶಯ ವೀಕ್ಷಣೆ: ನಾಳೆ ಗಂಗಾವತಿಗೆ ಸಚಿವ ಜಾರಕಿಹೊಳಿ - Balancing Reservoir Place
ನವಲಿ ಬಳಿ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಸಮತೋಲನ ಜಲಾಶಯದ ಸ್ಥಳದ ವೀಕ್ಷಣೆಗೆ ಶನಿವಾರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಆಗಮಿಸಲಿದ್ದಾರೆ ಎಂದು ಶಾಸಕ ಬಸವರಾಜ ದಡೇಸುಗೂರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಶುಕ್ರವಾರ ಸಂಜೆ ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ಹೊರಟು, ರಾತ್ರಿ ಹೊಸಪೇಟೆಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಶನಿವಾರ ಬೆಳಗ್ಗೆ ಮುನಿರಾಬಾದಿನಲ್ಲಿ ನೀರಾವರಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಿದ್ದಾರೆ. ಮಧ್ಯಾಹ್ನ 12.20ಕ್ಕೆ ಕನಕಗಿರಿಯ ಕನಕಾಚಲ ದೇಗುಲಕ್ಕೆ ಭೇಟಿ ನೀಡಿ ಬಳಿಕ ಉದ್ದೇಶಿತ ಸಮತೋಲನ ಜಲಾಶಯ ನಿರ್ಮಾಣ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸೂಗುರು ತಿಳಿಸಿದ್ದಾರೆ.