ಗಂಗಾವತಿ: ರಾಜ್ಯದ ನಾನಾ ಜಿಲ್ಲೆಗಳಿಗೆ ಕೆಲಸ ಅರಸಿ ದುಡಿಯಲು ಹೋಗಿದ್ದ ನೂರಾರು ಜನ ಕಾರ್ಮಿಕರು ತಂಡೋಪ ತಂಡವಾಗಿ ಯಾವುದೇ ಸುರಕ್ಷಿತ ಕ್ರಮವಿಲ್ಲದೇ ಆಗಮಿಸುತ್ತಿರುವ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಪರಣ್ಣ ಮುನವಳ್ಳಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ವಲಸೆ ಕೂಲಿಕಾರರನ್ನ ತಡೆದು ತರಾಟೆಗೆ ತೆಗೆದುಕೊಂಡ ಗಂಗಾವತಿ ಶಾಸಕ - ಕೊರೊನಾ ಎಫೆಕ್ಟ್
ವಲಸೆ ಬಂದ ಕೂಲಿಕಾರರನ್ನು ತಡೆದ ಶಾಸಕರು, ನಿಮ್ಮ ಆರೋಗ್ಯದ ಬಗ್ಗೆ ಮೊದಲು ಕಾಳಜಿ ಮಾಡಿ, ಬಳಿಕ ಇತರರನ್ನು ರಕ್ಷಿಸಿ, ಸರ್ಕಾರ ನೀಡುತ್ತಿರುವ ಯಾವುದೇ ಸಲಹೆ, ಸೂಚನೆ ಪಾಲಿಸದೇ ಹೋದಲ್ಲಿ ನಿಮ್ಮ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗಂಗಾವತಿ ಶಾಸಕ
ತಾಲೂಕಿನ ಬಸವಪಟ್ಟಣ ಗ್ರಾಮದಲ್ಲಿ ವಲಸೆ ಬಂದ ಕೂಲಿಕಾರರನ್ನು ತಡೆದ ಶಾಸಕರು, ನಿಮ್ಮ ಆರೋಗ್ಯದ ಬಗ್ಗೆ ಮೊದಲು ಕಾಳಜಿ ಮಾಡಿ, ಬಳಿಕ ಇತರರನ್ನು ರಕ್ಷಿಸಿ, ಸರ್ಕಾರ ನೀಡುತ್ತಿರುವ ಯಾವುದೇ ಸಲಹೆ, ಸೂಚನೆ ಪಾಲಿಸದೇ ಹೊದಲ್ಲಿ ನಿಮ್ಮ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಕರೆಯಿಸಿಕೊಂಡ ಶಾಸಕ, ಸ್ಥಳದಲ್ಲಿಯೇ ವಲಸೆ ಕೂಲಿಕಾರರ ಆರೋಗ್ಯ ತಪಾಸಣೆ ಮಾಡಿಸಿದರು. ಈ ಸಂದರ್ಭದಲ್ಲಿ ಕೆಲವರಿಗೆ ಜ್ವರದಂತ ಸಮಸ್ಯೆ ಕಾಣಿಸಿಕೊಂಡಿತ್ತು. ಕಟ್ಟುನಿಟ್ಟಾಗಿ ಮನೆಯಲ್ಲಿ ಇರುವಂತೆ ತಾಕೀತು ಮಾಡಿದರು.