ಗಂಗಾವತಿ:ಮತಹಾಕಲು ಬಂದಿದ್ದ ಯುವಕ ಮತಗಟ್ಟೆಯಲ್ಲಿ ಮತಪತ್ರ ಪಡೆದು ಅದನ್ನು ಪೆಟ್ಟಿಗೆಗೆ ಹಾಕುವ ಬದಲಿಗೆ ಹರಿದು ಹಾಕಿದ್ದ ಘಟನೆಗೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣೆ ವೇಳೆ ಮತಪತ್ರ ಹರಿದ ಯುವಕನ ಮೇಲೆ ಎಫ್ಐಆರ್ - voter tornes ballot paper during gram panchayat election
ಗಂಗಾವತಿಯಲ್ಲಿ ಮತದಾನ ಮಾಡುವ ವೇಳೆ ವೋಟ್ ಮಾಡದೇ ಮತಪತ್ರವನ್ನು ಹರಿದು ಹಾಕಿದ್ದ ಪ್ರಕರಣ ಸಂಬಂಧ ಆ ವ್ಯಕ್ತಿಯ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತಪತ್ರ ಹರಿದ ಯುವಕ
ಆನೆಗೊಂದಿ ಗ್ರಾಮದ ಮತಗಟ್ಟೆ ನಂಬರ್ ಮೂರರಲ್ಲಿ ಈ ಘಟನೆ ನಡೆದಿದ್ದು, ಕಡೇಬಾಗಿಲು ಗ್ರಾಮದ ನಂದಕುಮಾರ ದೇವೇಂದ್ರಪ್ಪ ಎಂಬ ಮತದಾರನ ಮೇಲೆ ಮತಗಟ್ಟೆ ಅಧಿಕಾರಿ ವಿರೂಪಾಕ್ಷಗೌಡ ಬಸವನಗೌಡ ಮಾಲಿ ಪಾಟೀಲ್ ದೂರು ನೀಡಿದ್ದಾರೆ.
ಮತದಾನ ಮಾಡಲು ಬಂದ ಆರೋಪಿ ಮತದಾರನಿಗೆ ಮತಪತ್ರ ನೀಡಲಾಗಿದೆ. ಆದರೆ ಆತ ಮತ ಪತ್ರವನ್ನು ಬಾಕ್ಸ್ನಲ್ಲಿ ಹಾಕದೇ ಹರಿದು ಹಾಕಿದ್ದು, ಈ ಬಗ್ಗೆ ತಿಳುವಳಿಕೆ ಹೇಳಲು ಹೋದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.