ಕರ್ನಾಟಕ

karnataka

ETV Bharat / state

15 ವರ್ಷಗಳ ನಂತರ ಶಾಲೆಗೆ ಭೇಟಿ: ಗುರುಗಳಿಗೆ ವಂದನೆ ಸಲ್ಲಿಸಿದ ಹಳೆ ವಿದ್ಯಾರ್ಥಿಗಳು - ಗುರುಗಳಿಗೆ ವಂದನೆ ಸಲ್ಲಿಸಿದ ಹಿರೆವಂಕಲಕುಂಟ ಹಳೆ ವಿದ್ಯಾರ್ಥಿಗಳು

ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರವಂಕಲಕುಂಟಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 2004-05ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಇಂದು ತಮಗೆ ಅಕ್ಷರ ಕಲಿಸಿದ ಗುರುಗಳಿಗೆ ಗುರು ವಂದನೆ ಸಲ್ಲಿಸಿದರು.

15 ವರ್ಷಗಳ ನಂತರ ಶಾಲೆಗೆ ಭೇಟಿ: ಗುರುಗಳಿಗೆ ವಂದನೆ ಸಲ್ಲಿಸಿದ ಹಳೆ ವಿದ್ಯಾರ್ಥಿಗಳು

By

Published : Nov 2, 2019, 6:26 PM IST

ಕೊಪ್ಪಳ:ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರವಂಕಲಕುಂಟಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 2004-05 ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಇಂದು ತಮಗೆ ಅಕ್ಷರ ಕಲಿಸಿದ ಗುರುಗಳಿಗೆ ಗುರು ವಂದನೆ ಸಲ್ಲಿಸಿದರು.

ಪ್ರೌಢ ಶಾಲೆಯ ಆವರಣದಲ್ಲಿ ನಡೆದ ಸುಂದರವಾದ ಸರಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಲಾಗಿ ನಿಂತುಕೊಂಡು ತಮಗೆ ಅಂದು ಅಕ್ಷರ ಕಲಿಸಿದ ಶಿಕ್ಷಕರನ್ನು ಗೌರವದಿಂದ ಸ್ವಾಗತಿಸಿದರು. ಅಲ್ಲದೆ ಅಂದಿನ ದಿನಗಳನ್ನು ಮೆಲುಕು ಹಾಕಿದ ಬಳಿಕ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಗುರು ವಂದನೆ ಸಲ್ಲಿಸಿದರು.

ಸುಮಾರು 15 ವರ್ಷದ ಬಳಿಕ ಸೇರಿದ ಸಹಪಾಠಿಗಳು ಒಬ್ಬರನ್ನೊಬ್ಬರು ಕಂಡು ಉಭಯಕುಶಲೋಪರಿ ವಿಚಾರಿಸಿದರು. ಓದು, ಉದ್ಯೋಗ, ಸಂಸಾರ ಹೀಗೆ ಹತ್ತು ಹಲವು ರೀತಿಯಲ್ಲಿ ಸಹಪಾಠಿಗಳು ಸಂತಸದಿಂದ ಮಾತನಾಡಿಕೊಂಡರು. ಗುರು ವಂದನೆಯ ಕಾರ್ಯಕ್ರಮದಲ್ಲಿ ಹಳೆಯ ಸ್ನೇಹಿತರ ಸಮ್ಮಿಲನ ಹಾಗೂ ಕಲಿಸಿದ ಗುರುಗಳ ದರ್ಶನದಿಂದ ಹಿರೇವಂಕಲಕುಂಟಾ ಗ್ರಾಮದ ಪ್ರೌಢ ಶಾಲೆಯ ಆವರಣ ಕಳೆಗಟ್ಟಿತ್ತು.

ABOUT THE AUTHOR

...view details