ಕುಷ್ಟಗಿ(ಕೊಪ್ಪಳ): ನಮ್ಮವರಿಗೆ ಎಲ್ಲವೂ ಗೊತ್ತಿರುವ ಸಕಲಕಲಾ ವಲ್ಲಭರಾಗಿದ್ದರೂ, ಯಾವೂದನ್ನೂ ಪಾಲಿಸದವರಾಗಿದ್ದೇವೆ ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬು ಪತ್ತಾರ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ವಪ್ರತಿಷ್ಠೆ ನಮ್ಮ ಸಮಾಜದ ದೌರ್ಭಾಗ್ಯ: ವಿಶ್ವಕರ್ಮ ಅಭಿವೃದ್ಧಿ ನಿಗಮದ ಬಾಬು ಪತ್ತಾರ್ ಬೇಸರ - Vishwakarma Community
ವಿಶ್ವಕರ್ಮ ಸಮಾಜದಲ್ಲಿ ಮುಗ್ದ ಜೀವಿಗಳಾಗಿದ್ದಾರೆ. ದೇವರಾಜ ಅರದು ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ ಇತ್ಯಾದಿ ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳಬೇಕೆಂದು ಸಮಾಜದವರಿಗೆ ಕರೆ ನೀಡಿದರು. ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಬಾಬು ಪತ್ತಾರ ಹೇಳಿದ್ದಾರೆ.
![ಸ್ವಪ್ರತಿಷ್ಠೆ ನಮ್ಮ ಸಮಾಜದ ದೌರ್ಭಾಗ್ಯ: ವಿಶ್ವಕರ್ಮ ಅಭಿವೃದ್ಧಿ ನಿಗಮದ ಬಾಬು ಪತ್ತಾರ್ ಬೇಸರ asda](https://etvbharatimages.akamaized.net/etvbharat/prod-images/768-512-10106304-thumbnail-3x2-vish.jpg)
ನಗರದ ಕಾಳಿಕಾದೇವಿ ಮಂದಿರದ ಸಮುದಾಯ ಭವನದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಅಂಗವಾಗಿ ನೂತನ ಗ್ರಾಪಂ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಪ್ರತಿಷ್ಠೆ, ಅಹಂಕಾರ ನಮ್ಮ ಸಮಾಜದ ದೌರ್ಭಾಗ್ಯವಾಗಿದೆ. ಹೀಗಿದ್ದರೆ ಸಮಾಜ ಉದ್ದಾರ ಆಗಲು ಸಾಧ್ಯವಿಲ್ಲ. ನಮ್ಮಲ್ಲಿ ಅಹಂಕಾರ ಎಲ್ಲಿಯವರೆಗೂ ಹೋಗುವುದಿಲ್ಲವೋ ಅಲ್ಲಿಯವರೆಗೂ ಸಮಾಜದಲ್ಲಿ ಉದ್ದಾರವಾಗುದಿಲ್ಲ ಎಂದರು.
ವೈಯಕ್ತಿಕವಾಗಿ ಒಬ್ಬರಿಗೆ ಬೇಡವಾದರೆ ಇಡೀ ಸಮಾಜದ ಸಮಸ್ಯೆ ಎಂದು ಬಿಂಬಿಸುವುದು ಸರಿ ಅಲ್ಲ. ದೇವರಾಜ ಅರದು ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ ಇತ್ಯಾದಿ ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳಬೇಕೆಂದು ಸಮಾಜದವರಿಗೆ ಕರೆ ನೀಡಿದರು.