ಗಂಗಾವತಿ:ರೈತರಿಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡುವ ಉದ್ದೇಶಕ್ಕೆ ಪ್ರತಿ ಲೀಟರ್ ಹಾಲಿನ ದರವನ್ನು ಎರಡು ರೂಪಾಯಿ ಹೆಚ್ಚಳ ಮಾಡಿ ಸರ್ಕಾರ ಫೆ.1ರಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ. ಆದರೆ, ಬಳ್ಳಾರಿ ಹಾಲು ಒಕ್ಕೂಟ ಮಾತ್ರ ಸರ್ಕಾರದ ಆದೇಶ ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ.
ಸರ್ಕಾರದ ಆದೇಶಕ್ಕೆ ಬಳ್ಳಾರಿ ಹಾಲು ಒಕ್ಕೂಟದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ!?
ಪ್ರತಿ ಲೀಟರ್ ಹಾಲಿನ ದರವನ್ನು ಎರಡು ರೂಪಾಯಿಗೆ ಹೆಚ್ಚಳ ಮಾಡಿ ಸರ್ಕಾರ ಫೆ.1ರಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ. ಆದರೆ, ಬಳ್ಳಾರಿ ಹಾಲು ಒಕ್ಕೂಟ ಮಾತ್ರ ಸರ್ಕಾರದ ಆದೇಶಕ್ಕೆ ಡೋಂಟ್‌ಕೇರ್ ಎಂಬಂತಿದೆ.
ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಕಾರ್ಯವ್ಯಾಪ್ತಿಗೆ ಹೊಂದಿರುವ ರಾಬಕೋ ಹಾಲು ಒಕ್ಕೂಟ ಮಾತ್ರ ಹಾಲಿನ ದರ ಹೆಚ್ಚಳ ಮಾಡಿದೆ. ಆದರೆ, ಅದನ್ನು ರೈತರಿಗೆ ಫೆ.1ರಿಂದಲೇ ಅನ್ವಯಿಸುವಂತೆ ಆದೇಶವಿದ್ದರೂ ರಾಬಕೋ ಹಾಲು ಮಂಡಳಿ ಮಾತ್ರ ಇನ್ನೂ ಅದರ ಜಾರಿಗೆ ಮೀನಾಮೇಷ ಎಣಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಹಾಲು ಒಕ್ಕೂಟದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಅವರು ಪ್ರತಿಕ್ರಿಯಿಸಿ, 'ಸಾಮಾನ್ಯ ಸಭೆ ಫೆ.17ರಂದು ನಡೆಯಲಿದೆ. ಆ ಬಳಿಕ ರೈತರಿಗೆ ದರ ಏರಿಕೆಯ ಲಾಭ ನೀಡಲಾಗುವುದು' ಎಂದು ಹೇಳಿದ್ದಾರೆ. ಇದು ಹಲವು ನಿರ್ದೇಶಕರ ಅಸಮಾಧಾನಕ್ಕೂ ಕಾರಣವಾಗಿದೆ.