ಕರ್ನಾಟಕ

karnataka

ETV Bharat / state

ಧಾರ್ಮಿಕ ಕ್ಷೇತ್ರ ಮುನ್ನೆಲೆಗೆ ಬರುವ ಸಂದರ್ಭದಲ್ಲಿ ವಿವಾದ ಸಹಜ : ವಿನಯ್ ಗುರೂಜಿ - anjanadri hill

ಧಾರ್ಮಿಕ ಕ್ಷೇತ್ರ ಮುನ್ನೆಲೆಗೆ ಬರುವ ಸಂದರ್ಭದಲ್ಲಿ ವಿವಾದಗಳು ಸಹಜ ಎಂದು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಹೇಳಿದರು..

ವಿನಯ್ ಗುರೂಜಿ
ವಿನಯ್ ಗುರೂಜಿ

By

Published : Jun 28, 2022, 3:08 PM IST

ಗಂಗಾವತಿ :ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಚಿಕ್ಕರಾಂಪೂರದ ಬಳಿ ಇರುವ ಅಂಜನಾದ್ರಿ ದೇಗುಲಕ್ಕೆ ಭೇಟಿ ನೀಡಿ ಸಹಸ್ರ ಕುಂಕುಮಾರ್ಚನೆ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, "ಅಂಜನಾದ್ರಿಯಂತಹ ಧಾರ್ಮಿಕ ಕ್ಷೇತ್ರ ಮುನ್ನೆಲೆಗೆ ಬರುವ ಸಂದರ್ಭದಲ್ಲಿ ವಿವಾದಗಳು ಸಹಜ. ಕರ್ನಾಟಕದ ಕಿಷ್ಕಿಂಧೆಯೇ ಹನುಮನ ಜನ್ಮಸ್ಥಳ ಎನ್ನುವುದರಲ್ಲಿ ಸಂದೇಹವಿಲ್ಲ. ಟಿಟಿಡಿಯ ಅಧ್ಯಕ್ಷ ಸುಬ್ಬಾರಾವ್ ನನ್ನ ಶಿಷ್ಯರಾಗಿದ್ದಾರೆ. ಹನುಮನ ಜನ್ಮಭೂಮಿ ಸ್ಥಳದ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡುತ್ತೇನೆ" ಎಂದರು.

ಇದನ್ನೂ ಓದಿ:ಕುಟುಂಬ ಸಮೇತ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಯದುವೀರ ಒಡೆಯರ್​

ABOUT THE AUTHOR

...view details