ಕರ್ನಾಟಕ

karnataka

ETV Bharat / state

ಜನರ ಸ್ವಯಂ ಪ್ರೇರಿತ ನಿರ್ಧಾರ: ಈ ಪ್ರವಾಸಿ ತಾಣ ಭಾಗಶಃ 'ಲಾಕ್'ಡೌನ್​​​​ - villagers decide to self lockdown

ಕೊರೊನಾ ಪ್ರಕರಣಗಳು ಕಾಣಿಸಿಕೊಳ್ಳದಿದ್ದರೂ ಲಾಕ್​​ಡೌನ್​​ ಮಾಡುವ ಕುರಿತು ಆನೆಗೊಂದಿ ಗ್ರಾಮಸ್ಥರೇ ಸ್ವಯಂ ನಿರ್ಣಯ ಕೈಗೊಂಡಿದ್ದಾರೆ.

self lockdown
ಬೇಲಿ ಹಾಕಿರುವುದು

By

Published : Jun 14, 2020, 1:05 AM IST

ಗಂಗಾವತಿ: ಕೊಪ್ಪಳ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ, ಐತಿಹಾಸಿಕ ಕುರುಹುಗಳ ಕೇಂದ್ರ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮ ಇದೀಗ ಭಾಗಶಃ ಲಾಕ್​​ಡೌನ್​​ ಆಗಿದೆ.

ಗ್ರಾಮಕ್ಕೆ ಯಾರೂ ಬರದಂತೆ ಬೇಲಿ ಹಾಕಿರುವುದು

ಕೊರೊನಾ ಪ್ರಕರಣಗಳು ಕಾಣಿಸಿಕೊಳ್ಳದಿದ್ದರೂ, ಲಾಕ್​​​ಡೌನ್​​ ಕೊಂಚ ಸಡಿಲಿಕೆ ಆಗುತ್ತಿದ್ದಂತೆಯೇ ಗ್ರಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಗ್ರಾಮವನ್ನು ಸಂಪೂರ್ಣ ಲಾಕ್​​ಡೌನ್​​ ಮಾಡಲು ಗ್ರಾಮಸ್ಥರೇ ಸ್ವಯಂ ನಿರ್ಣಯ ಕೈಗೊಂಡಿದ್ದಾರೆ.

ಅಲ್ಲದೆ, ಪ್ರವಾಸಿಗರಿಂದ ಊರಿಗೆ ಮತ್ತು ಜನರಿಗೆ ತೊಂದರೆಯಾಗುವುದು ಬೇಡ ಎಂದು ನಿರ್ಧಾರ ತಳೆದ ಗ್ರಾಮದ ಹಿರಿಯರು ಈ ನಿರ್ಣಯಕ್ಕೆ ಬಂದಿದ್ದಾರೆ. ಗ್ರಾಮದ ರಂಗನಾಥಸ್ವಾಮಿ ದೇಗುಲದಲ್ಲಿ ಸಭೆ ಸೇರಿದ ಊರು-ಕೇರಿಯ ಪ್ರಮುಖರು, ಎಲ್ಲಾ ರಸ್ತೆಗಳನ್ನು ಬಂದ್ ಮಾಡುವುದು, ಹೊರಗಿನಿಂದ ಬರುವ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಿದ ಬಳಿಕವೇ ಊರಿಗೆ ಬಿಟ್ಟುಕೊಳ್ಳುವ ನಿರ್ಣಯ ಕೈಗೊಂಡಿದ್ದಾರೆ.

ಸಭೆ ನಡೆಸಿದ ಗ್ರಾಮಸ್ಥರು

ABOUT THE AUTHOR

...view details