ಗಂಗಾವತಿ (ಕೊಪ್ಪಳ):ಅಕ್ರಮ ಮರಳು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಮರಳು ಕಾರ್ಮಿಕರು ಹಾಗೂ ಗ್ರಾಮದ ಮುಖಂಡನೊಬ್ಬನ ನಡುವೆ ಶಾಸಕರ ಸಮ್ಮುಖದಲ್ಲೇ ಗಲಾಟೆ ನಡೆದಿದೆ.
ಕಾರಟಗಿ ತಾಲೂಕಿನ ನಂದಿಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಸ್ವತಃ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸುಗೂರು ಸಮ್ಮುಖದಲ್ಲಿ ಗಲಾಟೆ ನಡೆದಿದೆ. ದಿಢೀರ್ ಎಂದು ನಡೆದ ಈ ಗಲಾಟೆಯಿಂದ ಕೆಲಕಾಲ ಸ್ವತಃ ಶಾಸಕರೇ ವಿಚಲಿತರಾದರು.
ತುಂಗಭದ್ರಾ ನದಿಯಲ್ಲಿ ಮರಳು ನಿಕ್ಷೇಪದ ಪಾಯಿಂಟ್ ಗುರುತಿಸಲಾಗಿದ್ದು, ಕಳೆದ ಹಲವು ವರ್ಷದಿಂದ ಇಲ್ಲಿನ ನೂರಾರು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಕಳೆದ ಕೆಲ ದಿನಗಳಿಂದ ಕೂಲಿ ಹೆಚ್ಚಳಕ್ಕೆ ಒತ್ತಾಯಿಸಿ ಕೆಲಸ ಸ್ಥಗಿತಗೊಳಿಸಿದ್ದರು.
ಶಾಸಕರ ಸಮ್ಮುಖದಲ್ಲೇ ಗ್ರಾಮದ ಮುಖಂಡನಿಗೆ ಕಾರ್ಮಿಕರಿಂದ ಹಲ್ಲೆ ಯತ್ನ ಇದನ್ನೇ ನೆಪ ಮಾಡಿಕೊಂಡ ಗ್ರಾಮದ ಮುಖಂಡನೊಬ್ಬ, ನೇರವಾಗಿ ನದಿಗೆ ಹಿಟಾಚಿಗಳನ್ನು ಇಳಿಸುವ ಮೂಲಕ ಮರಳನ್ನು ಎತ್ತಿ ಬೆಂಗಳೂರಿಗೆ ಕಳಿಸುತ್ತಿದ್ದು, ಕೂಲಿ ಕಾರ್ಮಿಕರು ಕಾಲಿಡದಂತೆ ಮಾಡಿದ್ದಾನೆ ಎಂದು ಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ.
ವ್ಯಕ್ತಿಯ ಕೃತ್ಯದಿಂದ ಆಕ್ರೋಶಗೊಂಡ ಕಾರ್ಮಿಕರು, ಇತ್ತೀಚೆಗೆ ರಸ್ತೆಯಲ್ಲಿ ವಾಹನ ಚಲಿಸದಂತೆ ಹೊಂಡ ತೆಗೆದು ಅಡ್ಡಿಪಡಿಸಿದ್ದರು. ಇದು ವಾದವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಇಂದು ಗ್ರಾಮಕ್ಕೆ ಶಾಸಕರು ಬರುತ್ತಿದ್ದಂತಯೇ ಸಹನೆಯ ಕಟ್ಟೆಯೊಡೆದೇ ಕಾರ್ಮಿಕರು ಮುಖಂಡನ್ನು ಎಳೆದಾಡಿ ಹಲ್ಲೆಗೆ ಯತ್ನಿಸುವ ಮೂಲಕ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ:ಮೈಸೂರಿನಲ್ಲಿ ಕೊರೊನಾ ಗೆದ್ದು ಬಂದ ಅವಿಭಕ್ತ ಕುಟುಂಬ: 17 ಮಂದಿಯೂ ಸೇಫ್