ಕೊಪ್ಪಳ: ತಾಲೂಕಿನ ಗಿಣಗೇರಿಯಿಂದ ಕರ್ಕಿಹಳ್ಳಿಯವರೆಗಿನ ರಸ್ತೆ ದುರವಸ್ಥೆಯಿಂದ ಕೂಡಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಗಿಣಗೇರಿಯಿಂದ ಕರ್ಕಿಹಳ್ಳಿಯವರೆಗೆ ಒಟ್ಟು 13 ಕಿ.ಮೀ ದೂರದ ರಸ್ತೆಯಿದೆ. ಈ ರಸ್ತೆಯು 20ಕ್ಕೂ ಅಧಿಕ ಉಕ್ಕಿನ ಕಾರ್ಖಾನೆ ಸೇರಿದಂತೆ ವಿವಿಧ ಕಾರ್ಖಾನೆಗಳಿಗೆ ಸಂಪರ್ಕ ರಸ್ತೆಯಾಗಿದೆ. ಅಷ್ಟೇ ಅಲ್ಲದೆ, ಇದೇ ರಸ್ತೆಯು ಅಲ್ಲಾನಗರ, ಹಿರೇಬಗಳನಾಳ, ಚಿಕ್ಕಬಗನಾಳ, ಕಾಸನಕಂಡಿ ಸೇರಿದಂತೆ 5 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದೆ. ಈ ಭಾಗದ ಕಾರ್ಖಾನೆಗಳಿಗೆ ಅದಿರು ಸೇರಿದಂತೆ ನಾನಾ ಸರಕುಗಳನ್ನು ತುಂಬಿಕೊಂಡು ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಇದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಈ ಭಾಗದ ಗ್ರಾಮಗಳ ಜನರು ಸಂಚಾರಕ್ಕೆ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.