ಗಂಗಾವತಿ: ರಾಯಚೂರು, ಕೊಪ್ಪಳ ಜಿಲ್ಲೆಯ ಲಕ್ಷಾಂತರ ರೈತರ ನಿರೀಕ್ಷೆಯಂತೆ ಸರ್ಕಾರ ಜುಲೈ 25ಕ್ಕೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಿದೆ. ಆದರೆ, ನೀರು ಹರಿಸಿದ ದಿನವೇ ತಾಲ್ಲೂಕಿನ ವಿಜಯನಗರ ಕಾಲುವೆ ಒಡೆದಿದೆ.
ತುಂಗಭದ್ರಾ ಎಡದಂಡೆಗೆ ನೀರು ಹರಿಸಿದ ದಿನವೇ ಒಡೆದ ಕಾಲುವೆ - Koppal News
ರಾಯಚೂರು, ಕೊಪ್ಪಳ ಜಿಲ್ಲೆಯ ಲಕ್ಷಾಂತರ ರೈತರ ನಿರೀಕ್ಷೆಯಂತೆ ಸರ್ಕಾರ ಜುಲೈ 25ಕ್ಕೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಿದೆ. ಆದರೆ, ನೀರು ಹರಿಸಿದ ದಿನವೇ ಗಂಗಾವತಿ ತಾಲ್ಲೂಕಿನ ವಿಜಯನಗರ ಕಾಲುವೆ ಒಡೆದಿದೆ.
ಗಂಗಾವತಿ: ತುಂಗಭದ್ರಾ ಎಡದಂಡೆಗೆ ನೀರು ಹರಿಸಿದ ದಿನವೇ ಒಡೆದ ಕಾಲುವೆ
ಬಸವನದುರ್ಗ ಗ್ರಾಮದ ಸಮೀಪ ಇರುವ ಹುಲಿಗೆಮ್ಮ ದೇವಸ್ಥಾನದ ಮೇಲ್ಭಾಗದಲ್ಲಿ ಘಟನೆ ನಡೆದಿದ್ದು, ರೈತರು ತಕ್ಷಣವೇ ನೀರಾವರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಮರಳಿನ ಚೀಲ ಅಡ್ಡ ಇಟ್ಟು, ಹೆಚ್ಚಿನ ನೀರು ರೈತರ ಹೊಲ-ಗದ್ದೆಗಳಿಗೆ ಹೋಗದಂತೆ ತಡೆದಿದ್ದಾರೆ.
ಇದರ ದುರಸ್ತಿ ಕಾರ್ಯ ಕೈಗೊಳ್ಳಲಾಗಿದ್ದು, ಎರಡು ದಿನದಲ್ಲಿ ಕಾಮಗಾರಿ ಮುಗಿಯಲಿದೆ ಎಂದು ಮೂಲಗಳು ತಿಳಿಸಿವೆ.