ಕರ್ನಾಟಕ

karnataka

ETV Bharat / state

ಶಾಲಾ ಆವರಣದಲ್ಲಿ ತರಗತಿ ಆರಂಭಿಸಿದ ವಿದ್ಯಾಗಮ ವಠಾರ ಶಾಲೆ ಶಿಕ್ಷಕರು - Kustagi latest news

ಮಹಾಮಾರಿ ಕೊರೊನಾದಿಂದ ಶಾಲಾ-ಕಾಲೇಜುಗಳೆಲ್ಲ ಮುಚ್ಚಿದ್ದು, ಮಕ್ಕಳಿಗೆ ಶೈಕ್ಷಣಿಕವಾಗಿ ತೊಂದರೆ ಉಂಟಾಗಿದೆ. ಆದರೆ ಕುಷ್ಟಗಿ ತಾಲೂಕಿನಲ್ಲಿ ಮಕ್ಕಳಿಗೆ ಅನುಕೂಲವಾಗಲೆಂದು ವಠಾರ ಶಾಲೆ ಶಿಕ್ಷಕರು ಪಾಠ ಹೇಳಿಕೊಡಲು ಮುಂದಾಗಿದ್ದಾರೆ.

Kustagi
Kustagi

By

Published : Aug 9, 2020, 2:09 PM IST

ಕುಷ್ಟಗಿ (ಕೊಪ್ಪಳ): ಕೋವಿಡ್ ನಿಂದ ಶಾಲೆಗಳೆಲ್ಲ ಮುಚ್ಚಿದ್ದು, ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಇದನ್ನು ಮನಗಂಡು ವಠಾರ ಶಾಲೆ ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡಲು ಮುಂದಾಗಿದ್ದಾರೆ.

ಕುಷ್ಟಗಿ ಕೃಷ್ಣಗಿರಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿದ್ಯಾಗಮ ವಠಾರ ಶಾಲೆ ಶಿಕ್ಷಕರು ತರಗತಿ ಪ್ರಾರಂಭಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಕೊಂಡು ಮಕ್ಕಳಿಗೆ ತರಗತಿ ನಡೆಸುತ್ತಿದ್ದು, ಇದಕ್ಕೆ ಪಾಲಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ABOUT THE AUTHOR

...view details