ಕರ್ನಾಟಕ

karnataka

ETV Bharat / state

'ಅಂಜನಾದ್ರಿ ದೇಗುಲ ಪೂಜಾ ಸಮಯ ನಿಗದಿ ಮಾಡಲು ತಹಶೀಲ್ದಾರ್ ಯಾರು? ' - ಅರ್ಚಕ ವಿದ್ಯಾದಾಸ ಬಾಬಾ

ದೇವರಿಗೆ ಪೂಜೆ ಸಲ್ಲಿಸಲು ಹಾಗೂ ಇತರೆ ಧಾರ್ಮಿಕ ಕಾರ್ಯ ಕೈಗೊಳ್ಳಲು ಸಮಯ ನಿಗದಿಯ ಸೂಚನೆ ನೀಡಲು ತಹಶೀಲ್ದಾರ್ ಯಾರು? ಎಂದು ಅಂಜನಾದ್ರಿ ದೇಗುಲದ ಅರ್ಚಕ ವಿದ್ಯಾದಾಸ ಬಾಬಾ ಪ್ರಶ್ನಿಸಿದ್ದಾರೆ.

gangavathi
ವಿದ್ಯಾದಾಸ ಬಾಬಾ

By

Published : Feb 22, 2021, 8:49 AM IST

ಗಂಗಾವತಿ: ದೇವರಿಗೆ ಪೂಜೆ ಸಲ್ಲಿಸಲು ಹಾಗೂ ಇತರೆ ಧಾರ್ಮಿಕ ಕಾರ್ಯ ಕೈಗೊಳ್ಳಲು ಸಮಯ ನಿಗದಿಯ ಸೂಚನೆ ನೀಡಲು ತಹಶೀಲ್ದಾರ್ ಯಾರು? ಅವರಿಗೆ ಯಾರು ಅಧಿಕಾರ, ಹಕ್ಕು ಕೊಟ್ಟಿದ್ದಾರೆ ಎಂದು ಅಂಜನಾದ್ರಿ ದೇಗುಲದ ಅರ್ಚಕ ವಿದ್ಯಾದಾಸ ಬಾಬಾ ಪ್ರಶ್ನಿಸಿದ್ದಾರೆ.

ಸಮಯ ನಿಗದಿ ಮಾಡಲು ತಹಶೀಲ್ದಾರ್ ಯಾರು? ಬಾಬಾ ಆಕ್ರೋಶ

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ವಿದ್ಯಾದಾಸ ಬಾಬಾ, ಈಗಾಗಲೇ ಧಾರವಾಡದ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ನನ್ನ ಧಾರ್ಮಿಕ ಹಕ್ಕು ಮತ್ತು ಪೂಜೆಗೆ ಸಂಬಂಧಿಸಿದಂತೆ ಯಾರ ಹಸ್ತಕ್ಷೇಪಕ್ಕೂ ಅವಕಾಶವಿಲ್ಲ. ಒಂದೊಮ್ಮೆ ಸಮಯ ನಿಗದಿ ಮಾಡುವುದಾದಲ್ಲಿ ತಹಶೀಲ್ದಾರ್ ನನಗೆ ಲಿಖಿತ ಪೂರ್ವಕವಾಗಿ ಕೊಡಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಆಧಾರದ ಮೇಲೆ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಮಯ ನಿಗದಿ ಮಾಡಲು ತಹಶೀಲ್ದಾರ್ ಯಾರು? ಬಾಬಾ ಆಕ್ರೋಶ
ಸಮಯ ನಿಗದಿ ಮಾಡಲು ತಹಶೀಲ್ದಾರ್ ಯಾರು? ಬಾಬಾ ಆಕ್ರೋಶ
ಸಮಯ ನಿಗದಿ ಮಾಡಲು ತಹಶೀಲ್ದಾರ್ ಯಾರು? ಬಾಬಾ ಆಕ್ರೋಶ

ಓದಿ:ಕೊಪ್ಪಳ ಜಿಲ್ಲಾಧಿಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ಬಾಬಾ ಅಂದರ್

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಈ ಹಿಂದಿನ ಕೊಪ್ಪಳ ಜಿಲ್ಲಾಧಿಕಾರಿ ಸುನಿಲ್ ಕುಮಾರ್, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸಿಲುಕಿ ಬಳಿಕ ಕೋರ್ಟ್​ಗೆ ಮನವಿ ಮಾಡಿ ಪ್ರಕರಣದಿಂದ ಪಾರಾಗಿದ್ದಾರೆ. ನನ್ನ ಧಾರ್ಮಿಕ ವಿಚಾರದಲ್ಲಿ ಯಾರೇ ಮೂಗು ತೂರಿಸಿದರೂ ಸಹಿಸುವುದಿಲ್ಲ ಎಂದು ಬಾಬಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details