ಗಂಗಾವತಿ: ಕಾಶಿಯ ವಿಶ್ವೇಶ್ವರ (ಸೋಮನಾಥ) ದೇಗುಲದ ಅಭಿವೃದ್ಧಿ ಸಮಿತಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷರಾದಂತೆ ಕರ್ನಾಟಕದ ಪ್ರಖ್ಯಾತ ಧಾರ್ಮಿಕ ತಾಣ ಅಂಜನಾದ್ರಿಯ ಹನುಮ ದೇಗುಲ ಸಮಿತಿಗೆ ಸಿಎಂ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಬೇಕು ಎಂದು ಅರ್ಚಕ ವಿದ್ಯಾದಾಸ ಬಾಬಾ ಒತ್ತಾಯಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆದ ಅಂಜನಾದ್ರಿ ದೇಗುಲದ ಅಭಿವೃದ್ಧಿ ವಿಚಾರದ ಸಭೆಯಲ್ಲಿ ವಿದ್ಯಾದಾಸ ಬಾಬಾ ಈ ಡಿಮ್ಯಾಂಡ್ ಇಟ್ಟಿದ್ದಾರೆ.