ಕರ್ನಾಟಕ

karnataka

ETV Bharat / state

ಸ್ಮಶಾನ ಭೂಮಿಗೆ ಶವ ಸಾಗಿಸುವ ಜಾತ್ಯತೀತ ಸೇವೆಗೆ ಮುಕ್ತಿವಾಹನ ರೆಡಿ - Veerashaiva Lingayata Seva Trust

ಆಗಸ್ಟ್. 3ರಂದು ಇಲ್ಲಿನ ಬುತ್ತಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಿಡಶೇಷಿ ಶ್ರೀ ಚನ್ನಬಸವ ಶಿವಾಚಾರ್ಯ ಹಾಗೂ ಮದ್ದಾನಿಮಠದ ಶ್ರೀ ಕರಿಬಸವ ಶಿವಾಚಾರ್ಯರು ಮುಕ್ತಿವಾಹನವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕುಷ್ಟಗಿ ತಾಲೂಕು
ಕುಷ್ಟಗಿ ತಾಲೂಕು

By

Published : Aug 1, 2020, 1:46 PM IST

Updated : Aug 1, 2020, 2:52 PM IST

ಕುಷ್ಟಗಿ (ಕೊಪ್ಪಳ):ಪಟ್ಟಣದಲ್ಲಿ ಶವಗಳನ್ನು ರುದ್ರಭೂಮಿಗೆ ತೆಗೆದುಕೊಂಡು ಹೋಗಲು ವೀರಶೈವ ಲಿಂಗಾಯತ ಸೇವಾ ಟ್ರಸ್ಟ್ 11 ಲಕ್ಷ ರೂ. ವೆಚ್ಚದಲ್ಲಿ ಮುಕ್ತಿ ವಾಹನ ಖರೀದಿಸಿದೆ.

ಆಗಸ್ಟ್. 3ರಂದು ಇಲ್ಲಿನ ಬುತ್ತಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಿಡಶೇಷಿ ಶ್ರೀ ಚನ್ನಬಸವ ಶಿವಾಚಾರ್ಯ ಹಾಗೂ ಮದ್ದಾನಿಮಠದ ಶ್ರೀ ಕರಿಬಸವ ಶಿವಾಚಾರ್ಯರು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಮಸೂತಿ ಮಾಹಿತಿ ನೀಡಿದರು.

ಈ ಮುಕ್ತಿ ವಾಹನ ವೀರಶೈವ ಲಿಂಗಾಯತ ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೇ ಜಾತ್ಯತೀತವಾಗಿ ಸೇವೆಗೆ ಬಳಸಿಕೊಳ್ಳಲಾಗುವುದು. ಈ ವಾಹನ ನಿಲ್ಲಿಸಲು ಶೆಡ್ ನಿರ್ಮಿಸಲಾಗುತ್ತಿದ್ದು, ವಾಹನ ನಿರ್ವಹಣೆಗಾಗಿ ಚಾಲಕ ಹಾಗೂ ಸಿಬ್ಬಂದಿಯನ್ನೂ ನೇಮಿಸಲಾಗಿದೆ.

ಗೌರವ ಅಧ್ಯಕ್ಷ ರವಿಕುಮಾರ ಹಿರೇಮಠ, ವೀರಣ್ಣ ಬಳಿಗಾರ, ಮಹಾಂತಯ್ಯ ಅರಳಲಿಮಠ, ಬಸವರಾಜ್ ಪಡಿ, ಪುರಸಭೆ ಸದಸ್ಯ ಬಸವರಾಜ್ ಬುಡಕುಂಟಿ, ಭೀಮನಗೌಡ ಜಾಲಿಹಾಳ ಮತ್ತಿತರರು ಸೇವಾ ಟ್ರಸ್ಟ್​​​ನಲ್ಲಿದ್ದಾರೆ.

Last Updated : Aug 1, 2020, 2:52 PM IST

ABOUT THE AUTHOR

...view details