ಕುಷ್ಟಗಿ (ಕೊಪ್ಪಳ): ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ ಅವರಿಗೆ ಸಮ್ಮೇಳನ ಎಂದಾಕ್ಷಣ ತುರಿಕೆ ಶುರುವಾಗುತ್ತವೆ. ಕೆರೆದುಕೊಂಡರೆ ಹೇಗೆ ಸಮಾಧಾನವಾಗುತ್ತಿದೆಯೋ ಹಾಗೆ ಮನು ಬಳಿಗಾರ ಅವರಿಗೆ ಸಮ್ಮೇಳನ ನಡೆಸಿದರೆ ಒಂದು ರೀತಿ ತುರಿಕೆಯಂತಹ ಸಮಾಧಾನ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಕುಟುಕಿದ್ದಾರೆ.
ಮನು ಬಳಿಗಾರ್ಗೆ ಸಮ್ಮೇಳನ ಎಂದರೆ ತುರಿಕೆ ಹಾಗೆ, ಕೆರೆದುಕೊಂಡ್ರೆ ಸಮಾಧಾನ: ಕುಂವಿ - President of Kendra Kannada Sahitya Parishad
ಹಾವೇರಿಯಲ್ಲಿ ಉದ್ದೇಶಿತ ಅಖಿಲ ಭಾರತ ಕನ್ನಡ ಸಮ್ಮೇಳನವನ್ನು ಕೋವಿಡ್ನ ಈ ಸಂದರ್ಭದಲ್ಲಿ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾಗಿರುವ ಡಾ. ಮನು ಬಳಿಗಾರ ಅವರಿಗೆ ಸಮ್ಮೇಳನ ನಡೆಸುವುದೇ ಒಂದು ಕೆಲಸ ಆಗಿದೆ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಲೇವಡಿ ಮಾಡಿದ್ದಾರೆ.
ರಿಯ ಸಾಹಿತಿ ಕುಂ. ವೀರಭದ್ರಪ್ಪ
ನರಗುಂದದ ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿಯಲ್ಲಿ ಉದ್ದೇಶಿತ ಅಖಿಲ ಭಾರತ ಕನ್ನಡ ಸಮ್ಮೇಳನವನ್ನು ಕೋವಿಡ್ನ ಈ ಸಂದರ್ಭದಲ್ಲಿ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾಗಿರುವ ಡಾ. ಮನು ಬಳಿಗಾರ ಅವರಿಗೆ ಸಮ್ಮೇಳನ ನಡೆಸುವುದೇ ಒಂದು ಕೆಲಸ ಆಗಿದೆ ಎಂದು ಲೇವಡಿ ಮಾಡಿದ್ದಾರೆ.
ಅವರಿಗೆ ಸಮ್ಮೇಳನ ಎಂದರೆ ತುರಿಕೆ ರೋಗದಂತಾಗಿದೆ. ಈ ರೋಗಕ್ಕೆ ತುರಿಸಿಕೊಂಡರೆ ಸಮಾಧಾನ ಹೀಗಾಗಿ ಆಗಾಗ್ಗೆ ಅವರಿಗೆ ತುರಿಸಬೇಕೆನ್ನಿಸುತ್ತಿರುತ್ತದೆ ಎಂದಿದ್ದಾರೆ.
TAGGED:
ಕೊಪ್ಪಳ