ಕುಷ್ಟಗಿ(ಕೊಪ್ಪಳ) :ಕೋವಿಡ್ ಹಿನ್ನೆಲೆ ಶಾಲೆಯಿಂದ ದೂರ ಉಳಿದ ಮಕ್ಕಳಿಗೆ ಕಲಿಕೆಯ ಆಸಕ್ತಿ ಹೆಚ್ಚಿಸಲು ಹಾಗೂ ಕೋವಿಡ್ ಕುರಿತು ಜಾಗೃತಿ ಮೂಡಿಸಲು ತಾಲೂಕಿನ ಮುದೇನೂರು ಸರ್ಕಾರಿ ಪ್ರೌಢಶಾಲಾ ವ್ಯಾಪ್ತಿಯಲ್ಲಿ ವಠಾರ ಶಾಲೆ ಆರಂಭವಾಗಿದೆ.
ಕುಷ್ಟಗಿಯಲ್ಲಿ ವಠಾರ ಶಾಲೆ.. ಶಾಲಾ ಚಟುವಟಿಕೆ ಜತೆಗೆ ಕೊರೊನಾ ಜಾಗೃತಿ - ಕುಷ್ಟಗಿ ವಠಾರ ಶಾಲೆ
ಮಕ್ಕಳಿಗೆ ಆಯಾ ವಿಷಯಗಳ ಬೋಧನೆ, ಹೋಮ್ ವರ್ಕ್ ಸಹ ನೀಡಲಾಗುತ್ತಿದೆ ಎಂದು ಮುಖ್ಯ ಶಿಕ್ಷಕ ಬಸವಂತಗೌಡ ಮೇಟಿ ತಿಳಿಸಿದರು. ಕೋವಿಡ್ ಆತಂಕದಲ್ಲಿ ಮಕ್ಕಳು ಕಾಲಹರಣ ಮಾಡುವ ಬದಲಿಗೆ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಪೂರಕವಾಗಿದೆ..
ಕಳೆದೆರಡು ದಿನಗಳಿಂದ ಶಾಲೆಯ ಶಿಕ್ಷಕರು, ಆಯಾ ಗ್ರಾಮಗಳಿಗೆ ಭೇಟಿ ನೀಡಿ ಮಕ್ಕಳಿಗೆ ಸೇತುಬಂಧ ತರಗತಿಗಳನ್ನು ನಡೆಸಿದ್ದಾರೆ. ಆಯಾ ಗ್ರಾಮಗಳ ಮನೆಯ ವಿಶಾಲ ಹಜಾರ, ದೇವಸ್ಥಾನದಲ್ಲಿ ಮಕ್ಕಳನ್ನು ಒಂದೆಡೆ ಸೇರಿಸಿ, ಅವರನ್ನು ಸಾಮಾಜಿಕ ಅಂತರದಲ್ಲಿ ಕೂರಿಸಿ ಮೊದಲು ಕೋವಿಡ್ ಕುರಿತು ಜಾಗೃತಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.
ಬಳಿಕ ಮಕ್ಕಳಿಗೆ ಆಯಾ ವಿಷಯಗಳ ಬೋಧನೆ, ಹೋಮ್ ವರ್ಕ್ ಸಹ ನೀಡಲಾಗುತ್ತಿದೆ ಎಂದು ಮುಖ್ಯ ಶಿಕ್ಷಕ ಬಸವಂತಗೌಡ ಮೇಟಿ ತಿಳಿಸಿದರು. ಕೋವಿಡ್ ಆತಂಕದಲ್ಲಿ ಮಕ್ಕಳು ಕಾಲಹರಣ ಮಾಡುವ ಬದಲಿಗೆ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಪೂರಕವಾಗಿದೆ. ಪ್ರತಿ ದಿನ ವಿಷಯವಾರು ಶಿಕ್ಷಕರು ಗ್ರಾಮಕ್ಕೆ ಭೇಟಿ ನೀಡುವ ಪರಿಪಾಠ ಹಾಕಿಕೊಂಡಿರುವುದು ಪೋಷಕರ ಮೆಚ್ಚುಗೆಗೆ ಕಾರಣವಾಗಿದೆ.