ಕರ್ನಾಟಕ

karnataka

ETV Bharat / state

ಆರೋಗ್ಯ ಇಲಾಖೆ ಎಡವಟ್ಟು: ನಾಲ್ಕು ತಿಂಗಳ ಹಿಂದೆ ನಿಧನ ಹೊಂದಿದ್ದವರಿಗೆ ಈಗ 2ನೇ ಡೋಸ್ ವ್ಯಾಕ್ಸಿನೇಷನ್!

ಕುಷ್ಟಗಿ ಪುರಸಭೆ ಉಪಾಧ್ಯಕ್ಷೆಯಾಗಿದ್ದ ದಿ.ತೋಟಮ್ಮ ಕಲಕಬಂಡಿ ಎಂಬುವವರು ನಿಧನರಾಗಿ 4 ತಿಂಗಳು ಕಳೆದಿವೆ. ಆದರೆ ಅವರಿಗೆ 2ನೇ ಡೋಸ್ ನೀಡಲಾಗಿದೆ ಎಂಬ ಸಂದೇಶ ಸೋಮವಾರ ಬಂದಿದೆಯಂತೆ.

ತೋಟಮ್ಮ ಕಲಕಬಂಡಿ
ತೋಟಮ್ಮ ಕಲಕಬಂಡಿ

By

Published : Jan 25, 2022, 8:50 AM IST

ಕುಷ್ಟಗಿ(ಕೊಪ್ಪಳ):ರಾಜ್ಯದಲ್ಲಿ ನಕಲಿ ವ್ಯಾಕ್ಸಿನೇಷನ್ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈಗ ಕೊಪ್ಪಳದಲ್ಲಿ ಇಂಥದ್ದೇ ಘಟನೆ ನಡೆದಿದೆ.ಕುಷ್ಟಗಿ ಪುರಸಭೆ ಉಪಾಧ್ಯಕ್ಷೆಯಾಗಿದ್ದ ದಿ.ತೋಟಮ್ಮ ಕಲಕಬಂಡಿ ನಿಧನರಾಗಿ 4 ತಿಂಗಳು ಕಳೆದಿದ್ದು, ಕೋವಿಡ್ ಲಸಿಕೆ ಪಡೆಯದಿದ್ದರೂ, ಎರಡನೇ ಡೋಸ್ ನೀಡಲಾಗಿದೆ ಎಂಬ ಸಂದೇಶ ಬಂದಿದೆ.

ತೋಟಮ್ಮ ಕಲಕಬಂಡಿ ಕಳೆದ ಸೆಪ್ಟೆಂಬರ್ 9 2021ರಂದು ವಯೋಸಹಜ ಕಾಯಿಲೆಯಿಂದ ಮೃತರಾಗಿದ್ದರು. ಅವರು ಮೊದಲ ಡೋಸ್ ಕೋವಿಶಿಲ್ಡ್ ಲಸಿಕೆ ಹಾಕಿಸಿಕೊಂಡಿದ್ದರು. ಆದರೆ ಅವರ ಪುತ್ರ ಅಮರೇಶ ಕಲಕಬಂಡಿ ಅವರ ಫೋನ್​ಗೆ 2ನೇ ಡೋಸ್ ಲಸಿಕೆಯನ್ನು ತೋಟಮ್ಮ ಕಲಕಬಂಡಿ ಅವರಿಗೆ ನೀಡಲಾಗಿದೆ ಎಂಬ ಸಂದೇಶ ಸೋಮವಾರ ಬಂದಿದೆಯಂತೆ.

ಕೋವಿಡ್ ಲಸಿಕೆ ಪಡೆಯದಿದ್ದರೂ ಎರಡನೇ ಡೋಸ್ ನೀಡಲಾಗಿದೆ ಎಂಬ ಸಂದೇಶ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ತೋಟಮ್ಮ ನಿಧನರಾಗಿ 4 ತಿಂಗಳಾಗಿದ್ದು ಲಸಿಕೆ ಹಾಕಿಸಿಕೊಳ್ಳದಿದ್ದರೂ, ಈ ರೀತಿಯ ಸಂದೇಶ ಬಂದಿರುವುದನ್ನು ಅಮರೇಶ ಕಲಕಬಂಡಿ ಪ್ರಶ್ನಿಸಿದ್ದಾರೆ. ಅಲ್ಲದೇ ಅಮರೇಶ ಕಲಕಬಂಡಿ ಕೂಡಾ 2ನೇ ಡೋಸ್ ಲಸಿಕೆ ಹಾಕಿಸಿಕೊಂಡಿಲ್ಲ. ಅವರಿಗೂ ಕೂಡ ಸೋಮವಾರ ಲಸಿಕೆ ಹಾಕಿಸಿಕೊಂಡಿರುವ ಮೆಸೇಜ್ ಬಂದಿದೆಯಂತೆ.

ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ಈ ರೀತಿ ಮೆಸೇಜ್​ಗಳು ಬಂದರೆ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುವವರಿಗೆ ವರದಾನವಾಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಆರೋಗ್ಯ ಇಲಾಖೆ ಈ ರೀತಿಯ ಎಡವಟ್ಟುಗಳನ್ನು ಮಾಡದಂತೆ ಅಮರೇಶ ಕಲಕಬಂಡಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ರೈಲಿನಿಂದ ಬಿದ್ದ ಪ್ರಯಾಣಿಕನನ್ನು ಕಾಪಾಡಿದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಸಿಬ್ಬಂದಿ! Video...

ABOUT THE AUTHOR

...view details