ಕರ್ನಾಟಕ

karnataka

ETV Bharat / state

ಕೊಪ್ಪಳ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಹಕ್ಕು ಚಲಾಯಿಸಿದ 90ರ ವೃದ್ಧೆ - koppal Elelction voting

ಕೊಪ್ಪಳ ಜಿಲ್ಲೆಯ ಕಾರಟಗಿ ಪುರಸಭೆ ಹಾಗೂ ಭಾಗ್ಯನಗರ, ಕುಕನೂರು, ಕನಕಗಿರಿ ಹಾಗು ತಾವರಗೆರೆಯಲ್ಲಿ ಪಟ್ಟಣ ಪಂಚಾಯತ್​ ಚುನಾವಣೆಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭಗೊಂಡಿದೆ.

Urban local body polling
Urban local body polling

By

Published : Dec 27, 2021, 10:23 AM IST

ಕೊಪ್ಪಳ: ಇಂದು ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದೆ.

ಜಿಲ್ಲೆಯ ಕಾರಟಗಿ ಪುರಸಭೆ, ಭಾಗ್ಯನಗರ, ಕುಕನೂರು, ಕನಕಗಿರಿ, ತಾವರಗೆರೆ ಪಟ್ಟಣ ಪಂಚಾಯತ್​ ಚುನಾವಣೆ ನಡೆಯುತ್ತಿದ್ದು, 100 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಇಂದು 77,655 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 253 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ‌. ಮತದಾನದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಮತದಾನದ ಹಕ್ಕು ಚಲಾಯಿಸಿದ 90ರ ವೃದ್ಧೆ

ಭಾಗ್ಯನಗರ ಪಟ್ಟಣದ ಮತಗಟ್ಟೆ ಸಂಖ್ಯೆ 6 ರಲ್ಲಿ ಕುಟುಂಬಸ್ಥರ ಸಹಾಯದಿಂದ 90 ವರ್ಷದ ವೃದ್ಧೆಯೊಬ್ಬರು ಆಗಮಿಸಿ ಮತದಾನ ಮಾಡಿದ್ದು ಗಮನ ಸೆಳೆಯಿತು.

ABOUT THE AUTHOR

...view details