ಗಂಗಾವತಿ :ಕೇಂದ್ರ ಸರ್ಕಾರದ 2020-21ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ನಗರದ ದಂತ ವೈದ್ಯೆ ಅಪೂರ್ವ ಬಾಸೂರು ಎಂಬ ಯುವತಿ 191ನೇ ರ್‍ಯಾಂಕ್ ಗಳಿಸಿದ್ದಾರೆ.
ನಗರದ ಸೆಂಟ್ ಫಾಲ್ಸ್ ಶಾಲೆಯಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಇವರು, ಬಳಿಕ ಮಂಗಳೂರಿನಲ್ಲಿ ಪಿಯುಸಿ ಮುಗಿಸಿದ್ದಾರೆ. ಅಪೂರ್ವ ಅವರ ತಂದೆ ಶ್ರೀಕಾಂತ ಬಾಸೂರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಸಹೋದರ ಬಿಇ ಸಿವಿಲ್ ಇಂಜಿನಿಯರಿಂಗ್ ಮುಗಿಸಿದ್ದಾರೆ.