ಕರ್ನಾಟಕ

karnataka

ETV Bharat / state

24 ಗಂಟೆ ಕಳೆದರೂ ಪತ್ತೆಯಾಗದ ಮೃತ ಬಾಲಕನ ಗುರುತು : ಪೊಲೀಸರಿಗೆ ಟೆನ್ಷನ್ - ಗಂಗಾವತಿ ತಾಲ್ಲೂಕಿನ ಶ್ರೀರಾಮನಗರ

ಮೂರು ದಿನಗಳ ಬಳಿಕ ಮೃತ ಬಾಲಕನ ಪಾಲಕರು ಪತ್ತೆಯಾಗದಿದ್ದಲ್ಲಿ ಅನಿವಾರ್ಯವಾಗಿ ಶವ ಸಂಸ್ಕಾರ ಮಾಡಲು ಪಂಚಾಯತ್‌ಗೆ ಮೃತ ದೇಹವನ್ನು ಹಸ್ತಾಂತರಿಸಲಾಗುವುದು ಎಂದು ಗ್ರಾಮೀಣ ಪಿಎಸ್ಐ ಜೆ ದೊಡ್ಡಪ್ಪ ತಿಳಿಸಿದ್ದಾರೆ..

unknown boy dead body found
ಅಪರಿಚಿತ ಬಾಲಕನ ಶವ ಪತ್ತೆ

By

Published : Mar 28, 2021, 6:07 PM IST

ಗಂಗಾವತಿ :ತಾಲೂಕಿನ ಶ್ರೀರಾಮನಗರದ ಉಪ ಕಾಲುವೆ ನಂಬರ್ 25ರಲ್ಲಿ ಶನಿವಾರ ಪತ್ತೆಯಾದ ಅಪರಿಚಿತ ಬಾಲಕನ ಶವದ ಗುರುತು 24 ಗಂಟೆ ಕಳೆದರೂ ಪತ್ತೆಯಾಗದ ಹಿನ್ನೆಲೆ ಪೊಲೀಸರಿಗೆ ಟೆನ್ಷನ್ ಶುರುವಾಗಿದೆ.

ಈಗಾಗಲೇ ವಾಟ್ಸ್​ಆ್ಯಪ್ ಗ್ರೂಪ್​ ಸೇರಿ ಗ್ರಾಮೀಣ ಪೊಲೀಸರು, ಹಣವಾಳ, ಸಿಂಗನಾಳ, ಮುಸ್ಟೂರು, ಕಲ್ಗುಡಿ ಮೊದಲಾದ ಗ್ರಾಮಗಳಲ್ಲಿ ಡಂಗೂರ ಹಾಕಿಸಿದ್ದಾರೆ. ಆದರೆ, ಈವರೆಗೂ ಬಾಲಕನ ಗುರುತು ಪತ್ತೆಯಾಗಿಲ್ಲ. ಸದ್ಯ ಶ್ರೀರಾಮನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್​​ನಲ್ಲಿ ಬಾಲಕನ ಮೃತ ದೇಹ ಸಂರಕ್ಷಿಸಿಡಲಾಗಿದೆ.

ಮೂರು ದಿನಗಳ ಬಳಿಕ ಮೃತ ಬಾಲಕನ ಪಾಲಕರು ಪತ್ತೆಯಾಗದಿದ್ದಲ್ಲಿ ಅನಿವಾರ್ಯವಾಗಿ ಶವ ಸಂಸ್ಕಾರ ಮಾಡಲು ಪಂಚಾಯತ್‌ಗೆ ಮೃತ ದೇಹವನ್ನು ಹಸ್ತಾಂತರಿಸಲಾಗುವುದು ಎಂದು ಗ್ರಾಮೀಣ ಪಿಎಸ್ಐ ಜೆ ದೊಡ್ಡಪ್ಪ ತಿಳಿಸಿದ್ದಾರೆ.

ABOUT THE AUTHOR

...view details